ಸಿಸಿಬಿ ಪೊಲೀಸರಿಂದ ಬ್ಲಾಕ್ ಪೇಪರ್ ದಂಧೆ ಬಯಲಿಗೆ
ಒಂದು ನೋಟ್ ಕೊಟ್ರೆ ನಾಲ್ಕು ನೋಟ್ ಅಗುವಂತಹ ಬ್ಲಾಕ್ ಪೇಪರ್ ನೀಡುತಿದ್ರು.ಅರೋಪಿಗಳು ಬ್ಲಾಕ್ ಪೇಪರ್ ಹಾಗೂ ಅದಕ್ಕೆ ಒಂದಷ್ಟು ಅಯೋಡಿನ್ ಹಾಗೂ ಬೇರೆ ಕೆಮಿಕಲ್ ನೀಡ್ತಿದ್ರು.ಅರೋಪಿಗಳ ಬಳಿ ಸುಮಾರು ಒಂದು ಕೋಟಿ ಮೌಲ್ಯದ ನಕಲಿ ಭಾರತೀಯ ಹಾಗೂ ವಿದೇಶಿ ನೋಟು ಗಳು ಪತ್ತೆಯಾಗಿದೆ.ಕಲರ್ ಪ್ರಿಂಟರ್ ಹಾಗೂ ಕೆಮಿಕಲ್ ವಶಕ್ಕೆ ಪಡೆಯಲಾಗಿದೆ.ಯು ಎಸ್ ಡಾಲರ್ ಪಡೆದು ಸಹ ಬ್ಲಾಕ್ ಪೇಪರ್ ನೀಡ್ತಿದ್ರು.ಈ ರೀತಿ ದಂಧೆ ಅಮೇರಿಕಾದದಲ್ಲಿ ಹೆಚ್ಚಾಗಿ ನಡೆಯುತ್ತಿತ್ತು.ಈಗ ಭಾರತದಲ್ಲಿ ಈ ರೀತಿಯಲ್ಲಿ ಚೀಟಿಂಗ್ ಮಾಡಲು ಯತ್ನಿಸಲಾಗಿದೆ.ಸದ್ಯ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತಿದ್ದ ದಂಧೆ ಬಗ್ಗೆ ಮಾಹಿತಿ ಇತ್ತು.ಮಾಹಿತಿ ಅನ್ವಯ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ದಾಳಿ ವೇಳೆ ಪ್ರಿಂಟರ್ ,ಹಣ ಹಾಗೂ ಕೆಮಿಕಲ್ ವಶಕ್ಕೆ ಪಡೆಯಲಾಗಿದೆ.