ಸಿಸಿಟಿವ್ ರಸ್ತೆ ಕಾಣುವಂತೆ ಅಳವಡಿಸಿ

ಭಾನುವಾರ, 27 ಫೆಬ್ರವರಿ 2022 (15:46 IST)
ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ಮನೆ ಮುಂದೆ ಸಿಸಿಕ್ಯಾಮರಾ ಅಳವಡಿಸುತ್ತಾರೆ. ಆ ವೇಳೆ ಮನೆ ಮುಂದಿನ ಸಾರ್ವಜನಿಕ ರಸ್ತೆಯೂ ಕಾಣುವಂತೆ ಸಿಸಿಕ್ಯಾಮರಾ ಅಳವಡಿಸಿದರೆ, ನಿಮ್ಮ ಮನೆ ಸುತ್ತ-ಮುತ್ತ ನಡೆಯುವ ಅಪರಾಧ ಪ್ರಕರಣ ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಗಲಿದೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ, ಮನೆ ಬೀಗ ಹಾಕಿ ಬೇರೆ ಪ್ರದೇಶಗಳಿಗೆ ಹೋದರೂ, ನಿಮ್ಮ ಮನೆ ಮುಂದೆ ನಡೆಯುವ ಘಟನೆಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಲು ಸಿಸಿಟಿವಿ ಸಹಾಯಕವಾಗಿದೆ ಎಂದು ಬೆಂಗಳೂರಿನಲ್ಲಿ ಕಮಲ್‌ ಪಂತ್‌ ಜನಸಾಮಾನ್ಯರಿಗೆ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ