ಸಿಡಿ ಪ್ರಕರಣ ಸಿಬಿಐನಿಂದ ತನಿಖೆ ಮಾಡಿಸಲಿ-ರವಿಕುಮಾರ್

ಬುಧವಾರ, 1 ನವೆಂಬರ್ 2023 (16:00 IST)
ರಾಜ್ಯಕ್ಕೆ ಎಐಸಿಸಿ ನಾಯಕರ ಆಗಮನ ಹಿನ್ನೆಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತಿಕ್ರಿಯಿಸಿದ್ದು,ದೆಹಲಿಯಿಂದ ಕಾಂಗ್ರೆಸ್ಸಿನ ನಾಯಕರು ಬಂದಿದ್ದಾರೆ.ಈ ಇಬ್ಬರು ಬಂದ ಕೂಡಲೇ ಜನರು ಏನು ಮಾತಾಡ್ತಿದ್ದಾರೆ ಅಂದರೆ ಕಾಂಗ್ರೆಸ್ ಗೆ ಗುರಿ ನಿಶ್ಚಯ ಮಾಡಲು ಬಂದಿದ್ದಾರೆ.ಪಂಚ ರಾಜ್ಯಕ್ಕೆ ಹಣ ಸರಬರಾಜು ಮಾಡಿಸಲು ಬಂದಿದ್ದಾರೆ ಅಂತಾ ಐಟಿ ರೇಡ್ ನಿಂದ ಸಿಕ್ಕಿರುವ ಹಣ ಯಾರದ್ದು ಎಂದು ಈ ಇಬ್ಬರು ಬಹಿರಂಗ ಪಡಿಸಬೇಕು.ಇವ್ರು ಕನ್ನಡ ನಾಡಿನ ರಕ್ಷಣೆ ಬಗ್ಗೆ ಮಾತಾಡ್ತಾರಂತೆ.ಕನ್ನಡದ ಸಂಪತ್ತು, ನೆಲ ಜಲ ಭಾಷೆ ರಕ್ಷಣೆ ಮಾಡೋರಲ್ಲ ಇವರು.ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ.ಸುಪ್ರೀಂಕೋರ್ಟ್ ನಲ್ಲಿ ಇವರಿಂದ ಸರಿಯಾದ ವಾದ ಮಾಡಿಲ್ಲ.

ತಮಿಳುನಾಡಿಗೆ ಇವ್ರು ಬರೀ ಸೋಲುವುದೇ ಕೆಲಸ.ಮೇಕೆದಾಟು ಯೋಜನೆ ಬಗ್ಗೆ ಇವ್ರು ಯಾರು ಮಾತಾಡ್ತಿಲ್ಲ.ಕೆ ಸಿ ವೇಣುಗೋಪಾಲ್, ಸುರ್ಜೇವಾಲ ಬಂದಿದ್ದಾರೆ.ಸೀನಿಯರ್ ಶಾಸಕರುಗಳಿಗೆ ಅಧ್ಯಕ್ಷ ಮಾಡಲು ಬಂದಿದ್ದಾರೆ.ನಿಗಮ ಮಂಡಲಿಗೂ ಇಷ್ಟು ಹಣ ಎಂದು ಗುರಿ ನಿಶ್ಚಯ ಮಾಡಲು ಬಂದಿದ್ದಾರೆ.ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ, ಗುದ್ದಾಟ ಮುಗಿಲು ಮುಟ್ಟಿದೆ.ಸರ್ಕಾರದ ಪತನ ಕುರಿತ ರಮೇಶ್ ಜಾರಕಿಹೊಳಿ ಮಾತು ಸತ್ಯವಾಗಿದೆ ಎಂದು ರವಿಕುಮಾರ್ ಹೇಳಿದ್ದಾರೆ.
 
ಇವರು ಇಬ್ಬರು ಬಂದಿರೋದು ಅತ್ಯಂತ ನಾಚಿಕೆಗೇಡಿನ ಸಂಗತಿ.ಇವ್ರು ಮತ್ತೆ ಕರ್ನಾಟಕದಲ್ಲಿ ಹಣ ಲೂಟಿ ಮಾಡಲು ಬಂದಿದ್ದಾರೆ.ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.ಪ್ರಕರಣ ವನ್ನು ಸಿಬಿಐಗೆ ವಹಿಸಬೇಕು.ಇದರ ಹಿಂದೆ ಮಹಾನ್ ನಾಯಕನ ಕೈವಾಡ ಇದೆ ಎಂದು ಹೇಳಿದ್ದಾರೆ.ಅದಕ್ಕಾಗಿ ಪ್ರಕರಣವನ್ನು ಸಿಬಿಐ ನಿಂದ ತನಿಖೆ ಮಾಡಿಸಲಿ.ಕನ್ನಡಕ್ಕೆ ಪ್ರತ್ಯೇಕ ಧ್ವಜಕ್ಕೆ ಅನುಮತಿ ವಿಚಾರ ಇದರ ಬಗ್ಗೆ ಅವ್ರು ಚರ್ಚಗೆ ಕರೆಯಲಿ, ಅದರ ಬಗ್ಗೆ ನಾವು ಮಾತಾಡ್ತೀವಿ.ಕೇಂದ್ರದ ನಿಯಮಾವಳಿಗಳ ಪ್ರಕಾರ ಚರ್ಚೆ ಆಗಲಿ ಎಂದು ರವಿಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ