ಮುಸ್ಲಿಂ ಮಹಿಳೆಯರೊಂದಿಗೆ ರಕ್ಷಾ ಬಂಧನ ಆಚರಿಸಿ

ಗುರುವಾರ, 3 ಆಗಸ್ಟ್ 2023 (16:20 IST)
ಮುಸ್ಲಿಂ ಸಹೋದರಿಯರ ಜತೆ ರಕ್ಷಾ ಬಂಧನ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಸೂಚನೆ ನೀಡಿದ್ದಾರೆ. ಮುಂಬರುವ ರಕ್ಷಾ ಬಂಧನ ಹಬ್ಬದಲ್ಲಿ ಸಾಧ್ಯವಾದಷ್ಟು ಮುಸ್ಲಿಂ ಮಹಿಳೆಯರನ್ನು ತಲುಪುವಂತೆ ಅವರು ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನ NDA ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರನ್ನು ತಲುಪಲು ರಕ್ಷಾ ಬಂಧನದ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಪ್ರಧಾನಿ ಕೇಳಿಕೊಂಡರು ಎಂದು ಸಭೆಯಲ್ಲಿದ್ದ ಕೆಲವು ಸಂಸದರು ಹೇಳಿದ್ದಾರೆ. ರಕ್ಷಾ ಬಂಧನದ ಹಬ್ಬವು ಈ ವರ್ಷ ಆಗಸ್ಟ್ 30 ರಂದು ನಡೆಯಲಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ