ನನ್ನ ಅವಧಿಯಲ್ಲಿ ಭಾರತ ವಿಶ್ವದ ಟಾಪ್ 3 ಆರ್ಥಿಕತೆಯಲ್ಲಿ ಒಂದಾಗಲಿದೆ: ನರೇಂದ್ರ ಮೋದಿ
ಬುಧವಾರ ದೆಹಲಿಯ ಪರಿಷ್ಕೃತ ಪ್ರಗತಿ ಮೈದಾನದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಅಭಿವೃದ್ಧಿ ಮತ್ತು ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, ಎತ್ತರಕ್ಕೆ ಏರಿದರೆ ನೀವು ಆಕಾಶವನ್ನು ತಲುಪುತ್ತೀರಿ. ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಭಾರತದಲ್ಲಿ ಮೂಲಸೌಕರ್ಯಗಳು ಬದಲಾಗುತ್ತಿವೆ.
ವಿಶ್ವದ ಅತಿ ಎತ್ತರದ ರೈಲು ಸೇತುವೆ, ಅತಿ ಉದ್ದದ ಸುರಂಗ, ಅತ್ಯಂತ ದೊಡ್ಡ ಸ್ಟೇಡಿಯಮ್, ಅತಿ ಉದ್ದದ ಮೋಟಾರು ರಸ್ತೆ ಹಾಗೂ ಅತಿ ಎತ್ತರದ ಪ್ರತಿಮೆ ಭಾರತದಲ್ಲಿದೆ. ಅದರೊಂದಿಗೆ ಆರ್ಥಿಕವಾಗಿ ಬಹಳ ವೇಗವಾಗಿ ಭಾರತ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.