ಬಾಹುಬಲಿ ಮಹಾಮಜ್ಜನ ಸಂಭ್ರಮ

ಶನಿವಾರ, 16 ಫೆಬ್ರವರಿ 2019 (10:31 IST)
ಇಂದಿನಿಂದ ಮೂರು ದಿನಗಳ ಕಾಲ ಬಾಹುಬಲಿ ಮಹಾಮಜ್ಜನ ಸಂಭ್ರಮ ಕಳೆಗಟ್ಟಲಿದೆ.

ಇಂದಿನಿಂದ ಮಹಾಮಜ್ಜನ ಆರಂಭಗೊಂಡಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾ ಮಸ್ತಕಾಭಿಷೇಕ ಭಕ್ತರನ್ನು ಸೆಳೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರದಲ್ಲಿ ಭಕ್ತ ಸಾಗರ ಸೇರುತ್ತಿದೆ. 9 ಬಗೆಯ ದ್ರವ್ಯಾಭಿಷೇಕ,
ಕ್ಷೀರ, ಹರಿತ, ಶ್ರೀಗಂಧ, ಅಷ್ಟಚಂದನ, ಚಂದನ, ಕೇಸರ, ಸೀಯಾಳ, ಕಷಾಯ, ಇಕ್ಷುರಸ, ಶ್ವೇತ ಕಲ್ಯಾಚೂರ್ಣ, ರಜತ ಪುಷ್ಪವೃಷ್ಟಿ, ಚತುಷ್ಕೋನ ಕಳಸ, ಶಾಂತಿಧಾರದ ಅಭಿಷೇಕ ನಡೆಯಲಿದೆ.

ಮೆರವಣಿಗೆ ಮೂಲಕ ಮಜಾಮಜ್ಜನಕ್ಕೆ ಚಾಲನೆ ನೀಡಲಾಗುತ್ತದೆ. ಧರ್ಮಸ್ಥಳ ಆವರಣದಿಂದ ರತ್ನಗಿರಿ ಬೆಟ್ಟದವರೆಗೂ ಮೆರವಣಿಗೆ ನಡೆಯಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ