ವರ್ಷದ ಮೊದಲ ಮಳೆ ಸಂಭ್ರಮ ಎಲ್ಲಿದೆ?

ಭಾನುವಾರ, 10 ಫೆಬ್ರವರಿ 2019 (15:44 IST)
ವರ್ಷದಲ್ಲಿ ಸುರಿದ ಮೊದಲ ಮಳೆ ಸಂಭ್ರಮ ಅಲ್ಲಿ ಮೇಳೈಸಿದೆ. ದಟ್ಟಕಾನನಕ್ಕೆ ಮಳೆಯ ಸಿಂಚನ ಹೊಸ ಉಲ್ಲಾಸ ತುಂಬಿದೆ.

ಚಾಮರಾಜನಗರದ ಬಂಡಿಪುರ ಅರಣ್ಯವಾಪ್ತಿಯಲ್ಲಿ ಸುರಿದ ವರ್ಷದ ಮೊದಲ ಮಳೆಯು ಹೊಸ ಕಳೆಗಟ್ಟುವಂತೆ ಮಾಡಿದೆ.
ಅಕಾಲಿಕ ಮಳೆಯಿಂದ ಸಂಭ್ರಮದ ಜೊತೆಗೆ ಜನರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.

ಮಧ್ಯಾಹ್ನ ಸುಮಾರು ಎರೆಡು ಗಂಟೆಗೆ ಆರಂಭವಾಗಿ ಸಂಜೆವರೆಗೂ ಜೋರಾಗಿ ಸುರಿದ ಮಳೆರಾಯ ತನ್ನ ಆರ್ಭಟ ತೋರಿದ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬೇಸಿಗೆಯಲ್ಲಿ ಭೂಮಿಯ ತಾಪ ಮತ್ತಷ್ಟು ಹೆಚ್ಚಾಗುವ ಭಯ ಆವರಿಸಿದೆ. ಕಳೆದ ಕೆಲ ದಿನಗಳಿಂದ ಬೆಂಬಿಡದೆ ಕಾಡಿದ ಬಿಸಿಲಿಗೆ ಕೊಂಚ ರಿಲೀಫ್ ತಂದಿತು ಮಳೆಯ ಸಿಂಚನ. ಮೊದಲ ಮಳೆಗೆ ಕೃಷ್ಣಮೃಗಗಳು ಮೈಯೊಡ್ಡಿ ಮಿಂದೆದ್ದವು. ವರ್ಷದ ಮೊದಲ ಮಳೆ ಕಂಡು ಅರಣ್ಯ ಇಲಾಖೆ ಸಿಬ್ಬಂದಿ ಸಂತಸಗೊಂಡರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ