ಎ.ಆರ್. ರೆಹಮಾನ್ - ಶೇಖರ್ ಕಪೂರ್ ನಡುವೆ ಬಿಗ್ ವಾರ್

ಗುರುವಾರ, 30 ಜುಲೈ 2020 (16:29 IST)
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಬಾಲಿವುಡ್‌ನಲ್ಲಿ ತನ್ನ ವಿರುದ್ಧ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ ಎಂಬ ಹೇಳಿಕೆಯಿಂದ ವಿವಾದ ಶುರುವಾಗಿದೆ.

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್  ಬಾಲಿವುಡ್‌ನಲ್ಲಿ ತನ್ನ ವಿರುದ್ಧ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ ಎಂಬ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ರೆಹಮಾನ್ ಅವರು ತಮ್ಮ ಹೇಳಿಕೆಯಿಂದ ಕಡಿಮೆ ಚಲನಚಿತ್ರಗಳ ಆಫರ್ ಗಳನ್ನು ಪಡೆಯುತ್ತಾರೆ ಎಂದು ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಹೇಳಿದ್ದಾರೆ.

 ಇದಕ್ಕೆ ಪ್ರತ್ಯುತ್ತರವಾಗಿ ರೆಹಮಾನ್ “ನಾನು ಒಳ್ಳೆಯ ಚಲನಚಿತ್ರಗಳನ್ನು ಬೇಡವೆಂದು ಹೇಳುವುದಿಲ್ಲ, ಆದರೆ ನನ್ನ ವಿರುದ್ಧ ಒಂದು ಗ್ಯಾಂಗ್ ಇದೆ ಎಂಬ ಭಾವನೆಯಿದೆ. ಇನ್ನಿತರರ ತಪ್ಪುಗ್ರಹಿಕೆಯಿಂದಾಗಿ ಕೆಲವು ಸುಳ್ಳು ವದಂತಿಗಳು ಹರಡುತ್ತಿವೆ. ಮುಖೇಶ್ ನನ್ನ ಬಳಿಗೆ ಬಂದಾಗ (ದಿಲ್ ಬೆಚರಾಕ್ಕಾಗಿ), ನಾನು ಅವನಿಗೆ ಎರಡು ದಿನಗಳಲ್ಲಿ ನಾಲ್ಕು ಹಾಡುಗಳನ್ನು ನೀಡಿದ್ದೇನೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ