ಕೇಂದ್ರ ಪೆಟ್ರೋಲ್ ಬೆಲೆ ಇಳಿಸಿದ್ದರಿಂದ ಲಾಭವಾಗಿದ್ದು ರಾಜ್ಯ ಬಸ್ ಪ್ರಯಾಣಿಕರಿಗೆ! ಹೇಗೆ ಗೊತ್ತಾ?!

ಶುಕ್ರವಾರ, 5 ಅಕ್ಟೋಬರ್ 2018 (09:15 IST)
ಬೆಂಗಳೂರು: ಕೇಂದ್ರ ಸರ್ಕಾರ ದೇಶದಾದ್ಯಂತ ತೈಲ ಬೆಲೆ ಇಳಿಕೆ ಮಾಡುವ ನಿರ್ಧಾರ ಘೋಷಿಸುತ್ತಿದ್ದಂತೆ ಸಂತಸ ಪಟ್ಟಿದ್ದು ಬಸ್ ಪ್ರಯಾಣಿಕರು.

ಕಾರಣ ತೈಲ ಬೆಲೆ ಏರಿಕೆ ನೆಪದಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ದರ ಏರಿಕೆ ಮಾಡಲು ಚಿಂತನೆ ನಡೆಸಿತ್ತು. ಅದು ಇಂದು ಅಥವಾ ನಾಳೆ ನಿರ್ಧಾರ ಪ್ರಕಟಿಸುವ ಯೋಚನೆಯಲ್ಲಿತ್ತು.

ಆದರೆ ಇದೀಗ ಕೇಂದ್ರ ಸರ್ಕಾರ ತೈಲ ಬೆಲೆ ಇಳಿಕೆ ಮಾಡಿರುವುದರಿಂದ ತಕ್ಷಣ ಬಸ್ ದರ ಏರಿಕೆ ಮಾಡಿದರೆ ವಿಪಕ್ಷ ಬಿಜೆಪಿ ಅದನ್ನೇ ಅಸ್ತ್ರವಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸಿದ್ಧತೆ ನಡೆಸಿದೆ. ಇದೇ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಇದೀಗ ಬಸ್ ದರ ಏರಿಕೆ ಮಾಡಲು ಯೋಚಿಸುವ ಸ್ಥಿತಿ ಬಂದಿದೆ. ಇವರಿಬ್ಬರ ಹಗ್ಗ ಜಗ್ಗಾಟದಿಂದ ಸಾರ್ವಜನಿಕರು ನೆಮ್ಮದಿ ಪಡುವಂತಾಗಿದೆ. ವಿಶೇಷವೆಂದರೆ ರಾಜ್ಯ ಸರ್ಕಾರ ಇದು ಎರಡನೇ ಬಾರಿ ಬಸ್ ದರ ಏರಿಕೆ ಮಾಡಲು ಹೊರಟು ಯಾವುದೋ ಕಾರಣಗಳಿಗೆ ಅಡ್ಡಿಯಾಗುತ್ತಿದೆ.  ಅಂತೂ ಇದರಿಂದ ಲಾಭವಾಗುತ್ತಿರುವುದು ಪ್ರಯಾಣಿಕರಿಗೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ