ಚಾಮರಾಜಪೇಟೆ ದನದ ಕೆಚ್ಚಲು ಕುಯ್ದ ಶೇಖ್ ನಸ್ರುಗೆ ಮಾನಸಿಕ ಅಸ್ವಸ್ಥ್ಯ ಎಂದು ರಕ್ಷಿಸಲು ನೋಡ್ತಿದ್ದಾರಾ

Krishnaveni K

ಸೋಮವಾರ, 13 ಜನವರಿ 2025 (14:36 IST)
Photo Credit: X
ಬೆಂಗಳೂರು: ಚಾಮರಾಜಪೇಟೆಯಲ್ಲಿ ದನದ ಕೆಚ್ಚಲು ಕುಯ್ದ ಆರೋಪದಲ್ಲಿ ಬಂಧಿತನಾಗಿರುವ ಶೇಖ್ ನಸ್ರುಗೆ ಮಾನಸಿಕ ಅಸ್ವಸ್ಥ ಎಂದು ಹಣೆಪಟ್ಟಿ ನೀಡಿ ರಕ್ಷಿಸಲು ನೋಡ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಹಸುವಿನ ಮಾಲಿಕ ಕರ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಚಾಮರಾಜಪೇಟೆಯಲ್ಲಿ ಶನಿವಾರ ತಡರಾತ್ರಿ ಕರ್ಣ ಎಂಬವರಿಗೆ ಸೇರಿದ ಮೂರು ಹಸುಗಳ ಕೆಚ್ಚಲು ಕುಯ್ದು ಕಾಲಿಗೆ ಮಚ್ಚಿನ ಹಲ್ಲೆ ಮಾಡಿ ಗಾಯಗೊಳಿಸಿ ವಿಕೃತಿ ಮೆರೆಯಲಾಗಿತ್ತು. ಈ ಘಟನೆ ದೇಶದಾದ್ಯಂತ ಗಮನ ಸೆಳೆದಿದೆ.

ಘಟನೆ ಸಂಬಂಧ ಮಾಲಿಕ ಕರ್ಣ ನೀಡಿದ ದೂರಿನನ್ವಯ ಶೇಖ್ ನಸ್ರು ಅಲಿಯಾಸ್ ನಸ್ರುದ್ದೀನ್ ಎಂಬಾತನನ್ನು ಬಂಧಿಸಲಾಗಿತ್ತು. ಕುಡಿದ ಮತ್ತಿನಲ್ಲಿ ಕೃತ್ಯವೆಸಗಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದ. ಆದರೆ ಬಂಧಿತನನ್ನು ಈಗ ಮಾನಸಿಕ ಅಸ್ವಸ್ಥ ಎಂಬಂತೆ ಬಿಂಬಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮಾನಸಿಕ ಅಸ್ವಸ್ಥ ಎಂದರೆ ಕೇಸ್ ನಿಂದ ಪಾರಾಗುವುದು ಸುಲಭ. ಈ ಕಾರಣಕ್ಕೆ ಆತನಿಗೆ ಈ ಹಣೆ ಪಟ್ಟಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಮಾಲಿಕ ಕರ್ಣನೇ ಪ್ರತಿಕ್ರಿಯೆ ನೀಡಿದ್ದಾರೆ. ‘ಆತ ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ. ಮಾನಸಿಕ ಅಸ್ವಸ್ಥನೇ ಆಗಿದ್ದರೆ ಜಾಸ್ತಿ ಹಾಲು ಕೊಡುವ ಹಸುವನ್ನೇ ಗುರುತಿಸಿ ಕ್ರೌರ್ಯ ಮೆರೆಯಲು ಹೇಗೆ ಸಾಧ್ಯ? ಅವನ ಅಡ್ರೆಸ್ ಹೇಳಿದ್ರೆ ಅವನು ಯಾರು ಅಂತ ಹೇಳ್ತೀನಿ ನಾನು. ಅವನು ಎಲ್ಲಿ ಕೆಲಸ ಮಾಡ್ತಾನೆ ಅಂತಾನೂ ಹೇಳ್ತೀನಿ.ಬೇಕೆಂದೇ ಮಾಡಿದ್ದಾರೆ ಸಾರ್’ ಎಂದು ಅಳಲು ತೋಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ