ಉತ್ತರ ಪ್ರದೇಶದ ಹರ್ದೋಯ್ ನಲ್ಲಿ ಈ ಘಟನೆ ನಡೆದಿದೆ. 36 ವರ್ಷದ ರಾಜೇಶ್ವರಿ ಎಂಬ ಮಹಿಳೆ ಆರು ಮಕ್ಕಳ ತಾಯಿ. ತನ್ನ ಗಂಡ, ಮಕ್ಕಳೊಂದಿಗೆ ಆರಾಮವಾಗಿದ್ದಳು. ಆದರೆ ಈಗ ಅದೇನಾಗಿ ಹೋಯ್ತೋ, ತನ್ನ ಮನೆಗೆ ಭಿಕ್ಷೆ ಬೇಡಲು ಬರುತ್ತಿದ್ದ ಭಿಕ್ಷುಕನೊಂದಿಗೇ ಪರಾರಿಯಾಗಿದ್ದಾಳೆ.
ನನ್ಹೇ ಪಂಡಿತ್ ಎಂಬ ಹೈಟೆಕ್ ಭಿಕ್ಷಕನೊಂದಿಗೆ ರಾಜೇಶ್ವರಿ ಓಡಿ ಹೋಗಿದ್ದಳು. ಭಿಕ್ಷೆ ಬೇಡುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದ. ಭಿಕ್ಷೆ ಬೇಡಿಯೇ ಸಾಕಷ್ಟು ಹಣ ಗಳಿಸಿಕೊಂಡಿದ್ದ. ಭಿಕ್ಷಕನ ಮೊಬೈಲ್ ನಂಬರ್ ಪಡೆದುಕೊಂಡು ಮಾತುಕತೆಯೂ ನಡೆಯುತ್ತಿತ್ತು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಇದೀಗ ಭಿಕ್ಷುಕ ಮತ್ತು ಮಹಿಳೆ ಮೇಲೆ ಪೊಲೀಸರು ಅಕ್ರಮ ಸಂಬಂಧ ಕೇಸ್ ದಾಖಲಿಸಿದ್ದಾರೆ.