ಚಂದ್ರು ಕೊಲೆ ಪ್ರಕರಣ CIDಗೆ

ಭಾನುವಾರ, 10 ಏಪ್ರಿಲ್ 2022 (18:24 IST)
ಬೆಂಗಳೂರಿನ ಜೆ.ಜೆ. ನಗರದಲ್ಲಿ ಇತ್ತೀಚೆಗೆ ನಡೆದ ಚಂದ್ರಶೇಖರ್ ಎಂಬ ಯುವಕನ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯಬೇಕು. ಸತ್ಯವನ್ನು ಬಯಲಿಗೆಳೆದು, ಹಂತಕರನ್ನು ಶಿಕ್ಷೆಗೆ ಒಳಪಡಿಸಬೇಕು ಎಂಬ ಉದ್ದೇಶದಿಂದ ಸಿಐಡಿ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸಿಐಡಿ ನಮ್ಮದೇ ಪೊಲೀಸರ ಇನ್ನೊಂದು ವಿಭಾಗವಾಗಿದೆ. ಗೊಂದಲ ಆಯ್ತು ಅನ್ನೋ ಕಾರಣಕ್ಕೆ ಸಿಐಡಿಗೆ ಕೊಟ್ಟಿಲ್ಲ, ಸರಿಯಾದ ತನಿಖೆ ನಡೆಯಲಿ ಅಂತ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಗೊಂದಲವನ್ನು ನಾನು ಇನ್ನಷ್ಟು ವಿವಾದ ಮಾಡಲ್ಲ, ಭಾಷೆ ವಿಚಾರದ ಬಗ್ಗೆ ನಾನು ಮಾತಾಡಲ್ಲ, ತನಿಖೆ ನಡೀತಿದೆ ಅಂತ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ