ಸಕಾಲಕ್ಕೆ ಸಂಬಳ ಇಲ್ಲದೆ ಚೆಕ್ ಬೌನ್ಸ್ ಕೇಸ್

ಶನಿವಾರ, 12 ಆಗಸ್ಟ್ 2023 (21:00 IST)
ಕಾಂಗ್ರೆಸ್ ಸರ್ಕಾರ ರಚನೆಯಾದಗಿಂದ ತಿಂಗಳ ಸಂಬಳ ವಿಚಾರದಲ್ಲಿ ಒಂದಲ್ಲ ಒಂದು ಸಮಸ್ಯೆಳು ಕೇಳಿಬರುತ್ತೀತ್ತು, ಆದ್ರೆ ಇದೀಗ ಅದೇ ಸಾಲಿನಲ್ಲಿ ಸಾಕಲಕ್ಕೆ ಸಂಬಳ ಇಲ್ಲದೆ ಸ್ವಾಯತ್ತತ್ತಾ ಆರೋಗ್ಯ ಸಂಸ್ಥೆಯ ಸಿಬ್ಬಂದಿಗಳು ಪರದಾಡುವಂತಾಗಿದೆ,ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಸರ್ಕಾರಿ ನೌಕರರು ಒಬ್ರಲ್ಲಾ ಒಬ್ರು ಸರ್ಕಾರದ ವಿರುದ್ಧ ಸಂಬಳ ಆಗಿಲ್ಲ ಎಂದು ದ್ವನಿ ಎತ್ತುತ್ತಿದ್ದರು,ಆದ್ರೆ ಇದೀಗ ಇವರ ಸಾಲಿನಲ್ಲಿ ನಗರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯವರು ಇದ್ದರೆ,ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಈ ಐದು ಗ್ಯಾರಂಟಿಯೋಜನೆಗಳಿಗೆ ಹಣ ಸಾಕಾಗುತ್ತಿಲ್ಲಾ ಸರ್ಕಾರದ ಖಾಜನೆಯಲ್ಲಿ ಕಾಸಿಲ್ಲ ಎಂದು ಹೇಳುತ್ತಿದ್ದಾರೆ ಅಂತಾ ಸರ್ಕಾರದ ವಿರುದ್ದ ಮೌಕಿಕ ಆರೋಪಗಳು ಕೇಳಿಬರುತ್ತಿವೆ.

ಇನ್ನೂ ನಗರದ ಕೆ,ಸಿ ಜನರಲ್ ಆಸ್ಪತ್ರೆ, ಕಿದ್ವಾಯಿ,ಜಯದೇವ,ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ,ಸಂಜಯ್ ಗಾಂಧಿ ಆಸ್ಪತ್ರೆ ಸೇರಿದಂತೆ ಆರೋಗ್ಯ ಸಂಸ್ಥೆಗಳ ಸಿಬ್ಬಂದಿಗೆ ಕಳೆದ ಎರಡೂ ಮೂರು ತಿಂಗಳಿನಿಂದ ಸಂಬಳ ವಿಳಂಬವಾಗ್ತಿದೆ, ಸರಿಯಾದ ಸಮಯಕ್ಕೆ ಸಂಬಳ ಸಿಗದೆ ಸಮಸ್ಯೆ ಹೆಚ್ಚಾಗುತ್ತಿದೆ,ಈ ಹಿಂದೆ ಎಲ್ಲಾ ಸಂಸ್ಥೆಗಳಿಗೆ ಮೂರು ತಿಂಗಳ ಅವಧಿಗೆ ಒಂದೇ ಬಾರಿಗೆ ಸಂಬಳ ಮಂಜೂರಾಗುತ್ತಿತ್ತು,ಈಗ ಎಚ್ಆರ್ ಎಂ ಎಸ್ ಪದ್ದತಿ ಜಾರಿಯಾದಗಿಂದ  ಸಂಬಳದಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಸಿಬ್ಬಂದಿಗಳು ಆರೋಪ ಮಾಡುತ್ತಿದ್ದಾರೆ. ಇನ್ನೂ ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದು ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಲಾಗಿದ್ದು  ಹೊಸ ಟೆಂಡರ್ ಪ್ರಕ್ರಿಯೆ ಬಗ್ಗೆ ಚರ್ಚೆ ಮೀಸಲಾಗುತ್ತಿದೆ ಆದಷ್ಟು ಬೇಗ ಸಂಬಳ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾ ತೀಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ