ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅಂಜುಬುರುಕ: ಮಲಕ ರೆಡ್ಡಿ
ಶುಕ್ರವಾರ, 24 ಜೂನ್ 2016 (13:22 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಜುಬುರುಕ. ಮಲ್ಲಿಕಾರ್ಜುನ ಖರ್ಗೆ ಕಂಡರೆ ಗಡಗಡ ನಡಗುತ್ತಾರೆ ಎಂದು ಮಾಜಿ ಸಚಿವ ಎ.ಬಿ.ಮಲಕರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಖರ್ಗೆ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ ಅವರು 1972 ರಲ್ಲಿ ಖರ್ಗೆಯವರನ್ನು ರಾಜಕೀಯಕ್ಕೆ ತಂದಿದ್ದೇವು.
ನಾನು,. ಧರ್ಮಸಿಂಗ್ ಮತ್ತು ಧರ್ಮರಾವ್ ಖರ್ಗೆಯವರಿಗೆ ರಾಜಕೀಯದಲ್ಲಿ ಬೆಳೆಯಲು ಆಧಾರ ಸ್ಥಂಭವಾಗಿದ್ದೇವು, ಆದರೆ, ಕಳೆದ ಬಾರಿ ನನ್ನ ಟಿಕೆಟ್ ಕಟ್ ಮಾಡಲು ಖರ್ಗೆ ಪ್ರಯತ್ನಿಸಿದ್ದರು ಎಂದು ಕಿಡಿಕಾರಿದ್ದಾರೆ.
ಸಂಪುಟ ಪುನಾರಚನೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಉದ್ದೇಶಪೂರ್ವಕವಾಗಿಯೇ ನನ್ನನ್ನು ಸಚಿವ ಸ್ಥಾನದಿಂದ ದೂರವಿರಿಸಿದ್ದಾರೆ. ಇದೊಂದು ಸ್ವಾರ್ಥ ರಾಜಕಾರಣ. ಪುತ್ರ ವ್ಯಾಮೋಹದಿಂದಾಗಿ ನನ್ನನ್ನು ಬಲಿ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಮಲಕರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ