ಬಾಗಲಕೋಟೆ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವೇದಾಂತ್ ಹೇಳಿಕೆಯನ್ನು ತಿರುಚಿ ಕಾಂಗ್ರೆಸ್ ಕೆಳಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಿಡಿಕಾರಿದೆ.
ಬಾಗಲಕೋಟೆಯ ಜಮಖಂಡಿ ಮೂಲದ ವಿದ್ಯಾರ್ಥಿ ವೇದಾಂತ್ ಜ್ಞಾನೋಬಾ ನಾವಿ ಅವರು ಪಿಯುಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಮಾಧ್ಯಮಗಳ ಮುಂದೆ ಮಾತನಾಡಿ ವೇದಾಂತ್ ನನ್ನ ವಿದ್ಯಾಭ್ಯಾಸಕ್ಕೆ ಮೋದಿ ಸರ್ಕಾರದ ಫಸಲ್ ಬಿಮಾ ಯೋಜನೆ ಸಹಕಾರಿಯಾಗಿದೆ ಎಂದು ಹೇಳಿಕೊಂಡಿದ್ದರು. ಅದನ್ನು ಕಟ್ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ರ್ಯಾಂಕ್ ಬಂದಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಅದಲ್ಲದೆ ಈ ವಿಡಿಯೋವನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇರ್ ಮಾಡಿ ನಮ್ಮ ಗ್ಯಾರಂಟಿಯ ಹಣದ ಪ್ರಯೋಜವಾಗಿದೆ ಎಂದು ಹೇಳಿಕೊಂಡಿದ್ದರು. ಕಾಂಗ್ರೆಸ್‌ನ ಕೀಳುಮಟ್ಟದ ರಾಜಕೀಯಕ್ಕೆ ಬಿಜೆಪಿ ಛೀಮಾರಿ ಹಾಕಿದೆ.
ಈ ಬಗ್ಗೆ ಕರ್ನಾಟಕ ಬಿಜೆಪಿಯ ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್ ಪಡೆದುಕೊಂಡ ವೇದಾಂತ್ ಹೇಳಿಕೆಯನ್ನು ಬಳಸಿಕೊಂಡು @INCKarnataka
ಇದೆಂಥಾ ಚೀಪ್ ಪೊಲಿಟಿಕ್ಸ್ ಮಾಡುತ್ತಿದೆ ನೋಡಿ.
ವೇದಾಂತ್ ಪ್ರಧಾನ ಮಂತ್ರಿ ಶ್ರೀ @narendramodi
ಅವರ ಸರ್ಕಾರದ ಫಸಲ್ ಬಿಮಾ ಯೋಜನೆಯ ಕುರಿತು ಅದರಿಂದ ಆದ ಅನುಕೂಲದ ಬಗ್ಗೆ ವಿವರಿಸಿದ್ದರೆ, ಅದನ್ನು ಕಟ್ ಮಾಡಿ ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ರ್ಯಾಂಕ್ ಬಂದಿದೆ ಎಂದು ಬಿಂಬಿಸಿಕೊಳ್ಳುತ್ತಿದೆ ಮಜಾವಾದಿ ಸರ್ಕಾರ.
ವೇದಾಂತ್‌ಗೆ ಅಭಿನಂದನೆ ಸಲ್ಲಿಸಬೇಕಾದ @siddaramaiah
ಅವರು ಕೂಡ, ಐಟಿ ಸೆಲ್ ಕೊಟ್ಟ ವಿಡಿಯೋ ಬಳಸಿ ಟೂಲ್ ಕಿಟ್ ಪ್ರಚಾರ ಪಡೆದುಕೊಳ್ಳುತ್ತಿರುವುದು ನಾಚಿಕೆಗೇಡು!