ಕಲಿಕಾ ಕೌಶಲ್ಯ ಕಳೆದುಕೊಂಡ ಮಕ್ಕಳು..!
ಕೊರೊನಾ ಆರ್ಭಟ ಹಿನ್ನೆಲೆಯಲ್ಲಿ ಒಂದುವರೆ ವರ್ಷ ಬಳಿಕ ಶಾಲೆಗಳು ಪುನಾರಂಭಗೊಂಡಿವೆ.ಜೊತೆಗೆ ಶಿಕ್ಷಕರಿಗೆ ಹೊಸ ತಲೆ ನೋವು ಶುರುವಾಗಿದೆ.ಮಕ್ಕಳು ಓದುವುದನ್ನೇ ಮರೆದು ಬಿಟ್ಟಿದ್ದಾರೆ.1/3 ಭಾಗ ಮಕ್ಕಳು ಭಾಷೆಯನ್ನೇ ಮರೆತು ಬಿಟ್ಟಿದ್ದಾರೆ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.ಐದನೇ ತರಗತಿ ಮಕ್ಕಳು 2ನೇ ತರಗತಿಯ ಪುಸ್ತಕವನ್ನು ಸರಾಗವಾಗಿ ಓದಲು ವಿಫಲವಾಗುತ್ತಿದ್ದಾರೆ. ವರ್ಣಮಾಲೆ, ಅಂಕಿ,ಸಾಮಾನ್ಯ ಗಣಿತವನ್ನು ನೆನೆಪಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ.ಸರಳ ವಾಕ್ಯ ಬರೆಯುವ ಜೊತೆಗೆ ಮಕ್ಕಳು ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ.