ಚಿರಂಜೀವಿ ಸರ್ಜಾ ಅಂದ್ರೆನೇ ಸೆಲೆಬ್ರೇಷನ್ ಅಂತಾರೆ ಮೇಘನಾ
ಚಿರಂಜೀವಿ ಸರ್ಜಾ ಅಂದ್ರೆನೇ ಸೆಲೆಬ್ರೇಷನ್ ಅಂತಾರೆ ಮೇಘನಾ.. ಹೀಗಾಗಿ ಅವರ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾವನ್ನ ಅನೌನ್ಸ್ ಮಾಡಿದ್ದಾರೆ.. ಚಿರು ಬರ್ತ್ ಡೇಯನ್ನ ಪ್ರತಿವರ್ಷದಂತೆ ಈ ವರ್ಷವೂ ಸೆಲೆಬ್ರೇಟ್ ಮಾಡೋದಕ್ಕೆ ಸಿದ್ಧವಾಗಿದ್ದಾರೆ.. ಚಿರು ಬೆಸ್ಟ್ ಫ್ರೆಂಡ್ ಪನ್ನಾಗಭರಣ ಈ ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದಾರೆ.. ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾವನ್ನ ವಿಶಾಲ್ ನಿರ್ದೇಶನ ಮಾಡ್ತಿದ್ದಾರೆ.. ವರ್ಷಗಳ ಬಳಿಕ ಮೇಘನಾ ಸಿನಿಮಾಗೆ ಕಮ್ ಬ್ಯಾಕ್ ಆಗ್ತಿರೋದು ಅಭಿಮಾನಿಗಳಿಗೂ ಸಂತಸ ತಂದಿದೆ.. ಚಿರು ಇಲ್ಲದ ಜೀವನ ಕಳೆಯೋದು ಕಷ್ಟ.. ಸಿನಿಮಾದಲ್ಲಿ ಬ್ಯುಸಿಯಾಗೋದು ಒಂದೇ ಮಾರ್ಗ ಅಂತಾರೆ ನಟಿ ಮೇಘನಾ ರಾಜ್.