ನಾಡಿನೆಲ್ಲೆಡೆ ಬಲು ಜೋರಾಗಿ ಇದೆ ಕ್ರಿಸ್ಮಸ್ ಸಂಭ್ರಮ

ಭಾನುವಾರ, 25 ಡಿಸೆಂಬರ್ 2022 (20:03 IST)
ಡಿಸೆಂಬರ್ ತಿಂಗಳು ಬಂತು ಅಂದ್ರೆ ಸಾಕು ಕ್ರಿಸ್ಮಸ್ ಸಂಭ್ರಮ ಶುರು ಅಂತನೇ ಲೆಕ್ಕ. ಅದ್ರಲ್ಲು ಎರಡು ವರ್ಷದ  ಬಳಿಕ ಈ ಬಾರಿ ಅದ್ದೂರಿಯಾಗಿ ಆಚಪಿಸಲು ಜನರು ಮುಂದಾಗಿದ್ದಾರೆ. ಇನ್ನು ಐಟಿ ಸಿಟಿ ಯ ಚರ್ಚ್ ಗಳು ಕಲರ್ಫುಲ್ ಲೈಟಿಂಗ್ ಯಿಂದ ಕಂಗೊಳಿಸುತ್ತಿತ್ತು.ಕಳೆದ ಎರಡು ವರ್ಷವೂ ಕೋವಿಡ್‌ನಿಂದಾಗಿ ಕ್ರಿಸ್‌ಮಸ್‌ ಸೆಲೆಬ್ರೇಷನ್ ಮಂಕಾಗಿತ್ತು. ಈಗ ಕೊರೊನಾ ಹೊಸ ತಳಿಯ‌ ಆತಂಕದ ನಡುವೆಯೂ ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಆಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.  ಕ್ರೈಸ್ತ  ಬಾಂಧವರಿಗೆ ಕ್ರಿಸ್ ಮಸ್ ದೊಡ್ಡ ಹಬ್ಬವಾಗಿದ್ದು  ಅತ್ಯಂತ ವಿಜೃಂಭಣೆಯಿಂದ ಆಚರಿಸ್ತಾರೆ. ಅದರಂತೆ ಇವತ್ತು ನಗರದ  ಚರ್ಚ್ ಗಳಲ್ಲಿ  ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸುವುದರ ಮೂಲಖ ಕ್ರಿಸ್ಮಸ್ ಆಚರಿಸಿದ್ರು.
 ಯೇಸು  ಕ್ರಿಸ್ತ ಹುಟ್ಟಿದ ದಿನವನ್ನು ಕ್ರೈಸ್ತರು ಕ್ರಿಸ್ಮಸ್ ಹಬ್ಬವೆಂದು ಆಚರಣೆ ಮಾಡ್ತಾರೆ. ಬಾಲ ಏಸುವನ್ನು ನೋಡಲು ಹೊಸ ಹೊಸ ಬಟ್ಟೆಗಳನ್ನು ಧರಿಸಿ ಚರ್ಚ್ಗಳಿಗೆ ಭೇಟಿ ಕೊಡ್ತಾರೆ. ಅದರಂತೆ ಇವತ್ತು ನಗರದ ಚರ್ಚ್ಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯ್ತು. ಕೈಯಲ್ಲಿ ಕ್ಯಾಂಡಲ್ ಹಿಡಿದುಕೊಂಡು ತಮ್ಮ ಇಚ್ಚೆಯನ್ನು ಈಡೇರಿಸಲು ಕ್ರಿಸ್ತನ ಮೊರೆ ಇಡೋ ಭಕ್ತರು ಒಂದೆಡೆಯಾದ್ರೆ, ಧರ್ಮಗುರುಗಳ ಪ್ರಾರ್ಥನೆಯನ್ನು ಕೇಳ್ತಾ ಇರೋ ಕ್ರೈಸ್ತರು ಇನ್ನೊಂದೆಡೆ. ಇವಿಷ್ಟು ನಗರದ ಶಿವಾಜಿನಗರದ ಸೆಂಟ್ ಮೇರಿ ಬೆಸಲಿಕಾ  ಚರ್ಚ್ ನಲ್ಲಿ ಕಂಡು ಬರ್ತಾ ಇದ್ದ ಸಾಮಾನ್ಯ ದೃಶ್ಯ. ಕ್ರಿಸ್ ಮಸ್ ಟ್ರೀ , ಸಾಂತಾ ಕ್ಲಾಸ್ ,ದನದ ಕೊಟ್ಟಿಗೆಯನ್ನು ಮಲಗಿರುವ ಏಸುವಿನ ಕ್ರಿಬ್. ಹೀಗೆ ನಗರದಲ್ಲಿದ್ದ ಎಲ್ಲಾ ಚರ್ಚ್ ಗಳು ಮದುವಣಗಿತ್ತಿಯಂತೆ ಅಲಂಕಾರಗೊಂಡಿತ್ತು . ನಿನ್ನೆ ರಾತ್ರಿ 11 ಗಂಟೆಯಿಂದಲೇ  ಎಲ್ಲಾ ಚರ್ಚೆಗಳಲ್ಲಿ ಕ್ರೈಸ್ತ ಭಾಂಧವರು ಪ್ರಾರ್ಥನೆಯನ್ನು ಮಾಡಿದ್ರು . 
ಮುಂಜಾನೆ ಚರ್ಚ್ ಗೆ ಆಗಮಿಸಿದ ಸಾವಿರಾರು ಕ್ರೈಸ್ತ ಬಾಂಧವರು ಕ್ಯಾಂಡಲ್ ಹಚ್ಚಿ ಯೇಸುವಿಗೆ ಪ್ರಾರ್ಥನೆ ಸಲ್ಲಿಸಿದ್ರು.ಚರ್ಚ್ ನ ಮುಂಭಾಗದಲ್ಲಿ ಯೇಸುವಿನ ಹುಟ್ಟು ಮತ್ತು ಜೀವನ ಕುರಿತ ದೃಶ್ಯಗಳು,ಗೋದಳಿ ನಿರ್ಮಿಸಲಾಗಿತ್ತು. ಇನ್ನು ಚರ್ಚ್ ನ ಎದುರು ಕ್ರಿಸ್ಮಸ್ ಟ್ರೀಯನ್ನು ಅಲಂಕರಿಸಿ ಸಂತನನ್ನು ನಿಲ್ಲಿಸಲಾಗಿತ್ತು.ಇನ್ನು ಕ್ರಿಸ್ತನ ದರ್ಶನ ಪಡೆಯಲು ಚರ್ಚ್ಗೆ ಬಂದಿದ್ದ ಸಹಸ್ತ್ರಾರು ಭಕ್ತರು ಅಲ್ಲಿದ್ದ ತಮ್ಮ ನೆಚ್ಚಿನ ಸಂತಾಕ್ಲಾಸ್ ಪುತ್ಥಳಿ ಜೊತೆ ಮತ್ತು ಕ್ರಿಸ್ಮಸ್ ಟ್ರೀ ಮುಂದೆ ಸೆಲ್ಫೀ ತೆಗೆದುಕೊಂದು ಖುಷಿಪಟ್ರು ಏಸುಕ್ರಿಸ್ತನ ಜನನವನ್ನು ಬಿಂಬಿಸುವ ಕೃತಕ ಮಾಡೆಲ್ ಗಳು ಜನಮನ ಸೆಳೀತು. ಇನ್ನೂ ಕುಟುಂಬ ಸಮೇತಾವಾಗಿ ಶಿವಾಜಿನಗರದ ಸೆಂಟ್ ಮೇರಿ ಬೆಸಲಿಕಾ ಚರ್ಚ್ ಗೆ  ಬೇಟಿ ನೀಡಿದ ಭಕ್ತರು ಅಲ್ಲಿನ ವಾತಾವಾರಣದಲ್ಲಿ ಸುಂದರ ಕ್ಷಣಗಳನ್ನು ಕಳೆದ್ರು.ಪ್ರತೀ ವರ್ಷ ಡಿಸೆಂಬರ್ ತಿಂಗಳು ಬಂದ್ರೆ ಸಾಕು ಕ್ರೈಸ್ತರಿಗೆ ಹಬ್ಬವೋ ಹಬ್ಬ ಕೇಕ್ ತಯಾರಿಸುವುದರಲ್ಲಿ ಬ್ಯುಸಿಯಾಗಿರ್ತಾರೆ. ಇನ್ನು ಕ್ರಿಸ್ಮಸ್ ದಿನ ಹಾಗೂ ಹೊಸ ವರ್ಷ ವನ್ನು ಅದ್ದೂರಿಯಿಂದ ಸ್ವಾಗತಿಸ್ತಾರೆ. ಅದೇನೇ ಇರಲಿ ಹಳೆ ನೋವುಗಳನ್ನು ಮರೆತು ಹೊಸ ಜೀವನಕ್ಕಾಗಿ ಹೊಸವರ್ಷವನ್ನು ಸ್ವಾಗತಿಸುವ ತಯಾರಿ ಇಂದಿನಿಂದ ಆರಂಭವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ