ಮಳೆ ಜೊತೆ ಚುಮು ಚಮು ಚಳಿ

ಮಂಗಳವಾರ, 30 ನವೆಂಬರ್ 2021 (10:55 IST)
ರಾಜ್ಯದಲ್ಲಿ ಮಳೆ ತಗ್ಗಿದ್ರೂ ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ.
ಸೋಮವಾರ ರಾಜ್ಯದ ಬಹುತೇಕ ಭಾಗದಲ್ಲಿ ಮೋಡ ಮುಸುಕಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗಿದೆ. ಇಂದು ಸಹ ಇದೇ ವಾತಾವರಣ ಇರಲಿದೆ. ಇನ್ನು ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಶಿವಮೊಗ್ಗ, ಕೋಲಾರ, ಚಿಕ್ಕಮಗಳೂರಿನ ಭಾಗಗಳಲ್ಲಿ ಮಳೆಯ ಸಿಂಚನ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಂಗಳೂರು ಭಾಗದಲ್ಲಿಯ ಯೆಲ್ಲೋ ಅಲರ್ಟ್ ಹಿಂಪಡೆಯಲಾಗಿದೆ. ಮತ್ತೊಂದು ಕಡೆ ಚಳಿಗಾಲ ಆರಂಭವಾಗಿದ್ದು, ದಿನ ದಿನಕ್ಕೆ ಚಳಿ ಸಹ ಹೆಚ್ಚಾಗುತ್ತಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸೋಮವಾರ ಸಹ ಸಿಲಿಕಾನ್ ಸಿಟಿಯಲ್ಲಿ ಬಿಟ್ಟು ಬಿಟ್ಟು ಮಳೆಯಾಗಿದೆ. ಬೆಳಗ್ಗೆಯ ಇಬ್ಬನಿಗೆ ಸಿಲಿಕಾನ್ ಸಿಟಿ ಜನರು ಚಳಿಯಿಂದ ಗಢ ಗಢ ನಡಗುವಂತಾಗಿತ್ತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ