ಎಲ್ಲಿ ಎಷ್ಟು ಮಳೆಯಾಗಿದೆ? ತಿಳಿಯಿರಿ

ಶನಿವಾರ, 27 ನವೆಂಬರ್ 2021 (07:08 IST)
ತಮಿಳುನಾಡು ವರುಣನ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಮಳೆಯಿಂದ ಚೇತರಿಸಿಕೊಳ್ಳುತ್ತಿದ್ದ ಚೆನ್ನೈಗೆ  ಸೈಕ್ಲೋನ್ ಗಾಯದ ಮೇಲೆ ಬರೆ ಎಳೆಯುತ್ತಿದೆ.
ಶುಕ್ರವಾರ ಸಂಜೆವರೆಗೆ  ಎಂಆರ್ಸಿ ನಗರ (ಚೆನ್ನೈ) 23.5 ಮಿ.ಮೀ., ತಾರಾಮಣಿ (ಚೆನ್ನೈ) 15 ಮಿ.ಮೀ., ವೈಎಂಸಿಎ ನಂದನಂ (ಚೆನ್ನೈ) 26 ಮಿ.ಮೀ. ಎಸಿಎಸ್ ವೈದ್ಯಕೀಯ ಕಾಲೇಜು (ಕಾಂಚೀಪುರಂ) – 36 ಮಿ.ಮೀ., ಹಿಂದೂಸ್ತಾನ್ ವಿಶ್ವವಿದ್ಯಾಲಯ (ಕಾಂಚಿಪುರಂ) 21 ಮಿಮೀ, ಗುಡ್ ವಿಲ್ ಶಾಲೆ, ವಿಲ್ಲಿವಕ್ಕಂ (ತಿರುವವಳ್ಳುರ್. ಚೆಂಬರ್ 6 ಟಿಎಂಎಂ 6) ) - 8.5 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ತಮಿಳುನಾಡಿನ ಎಲ್ಲ ನದಿಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಇನ್ನು ಯಾವುದೇ ಕ್ಷಣದಲ್ಲಿಯೂ ಜಲಾಶಯಗಳಿಂದ ನದಿಗೆ ನೀರು ಬಿಡುವ ಸಾಧ್ಯತೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ