ಗ್ರಾಹಕರಿಂದ ತುಂಬಿತುಳುಕಿದ ಸಿಟಿ ಮಾರ್ಕೆಟ್

ಗುರುವಾರ, 9 ಸೆಪ್ಟಂಬರ್ 2021 (18:41 IST)
ಬೆಂಗಳೂರು:  ನಾಡಿನೆಲ್ಲೆಡೆ ಗೌರಿ, ಗಣೇಶ ಹಬ್ಬದ ಸಂಭ್ರಮ. ಸಿಲಿಕಾನ್ ಸಿಟಿಯಲ್ಲಿ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದ್ದು, ನಗರದ ಮಾರುಕಟ್ಟೆಗಳೆಲ್ಲಾ ಗ್ರಾಹಕರಿಂದ ತುಂಬಿ ತುಳಕ್ತಿದೆ. ಇದ್ರ ಜೊತೆಗೆ ಹಣ್ಣು, ಹೂಗಳ ಬೆಲೆ ಗಗನಕ್ಕೇರಿದ್ರು ಕೂಡ, ಗ್ರಾಹಕರೆಲ್ಲಾ ಹಬ್ಬದ ಶಾಂಪಿಂಗ್‌ನಲ್ಲಿ ಬ್ಯುಸಿಯಾಗಿದ್ರು. ಗಣಪತಿ ಬಪ್ಪಾ ಮೋರಿಯಾ ಅಂತ ಗಣಪನ್ನ ಆರಾಧಿಸೋಕೆ ಬೆಂಗಳೂರು ಮಂದಿ ಸಿದ್ದರಾಗಿದ್ದಾರೆ. ಹೀಗಾಗಿ ಹಬ್ಬ ಆಚರಿಸಲು ಗ್ರಾಹಕರು ಇಂದು ಹಬ್ಬಕ್ಕೆ ಬೇಕಾದ ವಸ್ತುಗಳನ್ನ ಕೊಳ್ಳೋದ್ರಲ್ಲಿ ಬ್ಯುಸಿಯಾಗಿದ್ರು. ನಗರದ ಗಾಂಧಿ ಬಜಾರ್, ಮಲ್ಲೇಶ್ವರಂ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಹಲವಾರು ಮಾರುಕಟ್ಟೆಗಳಲ್ಲಿ ಇಂದು ವ್ಯಾಪಾರ ವಹಿವಾಟು ಜೋರಾಗಿತ್ತು. ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ಬಾಳೇ ಕಂಬ ಸೇರಿದಂತೆ ಹಲವಾರು ವಸ್ತುಗಳ ಬೆಲೆ ಗಗನಕ್ಕೇರಿದ್ದರು ಗ್ರಾಹಕರು ಮಾತ್ರ ಕೊಳ್ಳುವ ಬ್ಯುಸಿಯಲ್ಲಿದ್ದರು. ಇನ್ನು ಯಾವ್ಯಾವ ಹೂಗಳು ಎಷ್ಟು ಬೆಲೆ ಇದೆ ಅಂತ ನೋಡೋದಾದ್ರೆ,
 
 
ಹೂಗಳ ದರ (೧ ಕೆ.ಜಿಗೆ)
 
ಚೆಂಡು ಹೂವು (1kg) : ಕಳೆದ ವಾರ - 30 - 50 : ಈಗೀನ ಬೆಲೆ 80 - 120
 
ಮಲ್ಲಿಗೆ (1kg) : ಕಳೆದ ವಾರ - 600 : ಈಗೀನ ಬೆಲೆ - 800
 
ಮಳ್ಳೆ ಹೂವು (1kg) : ಕಳೆದ ವಾರ - 400 : ಈಗೀನ ಬೆಲೆ - 600
 
ಗುಲಾಬಿ (1kg) : ಕಳೆದ ವಾರ - 200 : ಈಗೀನ ಬೆಲೆ - 240
 
ಮಿಲ್ಕಿ ವೈಟ್ (1kg) : ಕಳೆದ ವಾರ - 200 : ಈಗೀನ ಬೆಲೆ - 300
 
 
ಇನ್ನು ಹಣ್ಣುಗಳ ಬೆಲೆ ಕೂಡ ಗಗನಕ್ಕೇರಿದ್ದು, ಅವುಗಳ ಬೆಲೆ ಹೀಗಿದೆ.
 
 
ಹಣ್ಣುಗಳ ದರ (೧ ಕೆ.ಜಿಗೆ)
 
ಶಿಮ್ಲಾ ಸೇಬು (1kg) : ಕಳೆದ ವಾರ - 60 : ಈಗೀನ ಬೆಲೆ - 120
 
ಸೀತಾಫಲ (1kg) : ಕಳೆದ ವಾರ - 40 : ಈಗೀನ ಬೆಲೆ - 80
 
ಮುಸೂಂಬಿ (1kg) : ಕಳೆದ ವಾರ - 30 : ಈಗೀನ ಬೆಲೆ - 60
 
ದಾಳಿಂಬೆ (1kg) : ಕಳೆದ ವಾರ - 80 : ಈಗೀನ ಬೆಲೆ - 150
ಇನ್ನು ಜೋಡಿ ಬಾಳೇಕಂಬಕ್ಕೆ 50 ರೂಪಾಯಿಯಿಂದ ಎತ್ತರಕ್ಕೆ ತಕ್ಕಂತೆ 250 ರೂಪಾಯಿವರೆಗೆ ಇದೆ. ಗರಿಕೆ ಕಟ್ಟಿಗೆ 20ರಿಂದ 30 ರೂಪಾಯಿ, ಮಾವಿನ ಎಲೆಗೆ 20 ರೂಪಾಯಿ ಇದೆ.ಇನ್ನು ನಾಳೆಯೇ ಹಬ್ಬವಿರೋದ್ರಿಂದ ಇಂದು ಖರೀದಿಯ ಭರಾಟೆ ಕೂಡ ಜೋರಾಗಿತ್ತು. ಬೆಲೆ ಕೈಗೆಟುಕದಂತಿದ್ರೂ, ವರ್ಷಕ್ಕೊಂದು ಬಾರಿ ಬರೋ ಹಬ್ಬ, ಆದ್ರಿಂದ ಬೆಲೆ ಹೆಚ್ಚಾದ್ರೂ ಸಂಪ್ರದಾಯ ಬಿಡೋ ಹಾಗಿಲ್ಲ ಅಂತಾರೆ ಗ್ರಾಹಕರು.
 
 
ಇನ್ನು ನಗರದ ಮಲೇಶ್ವರಂನ ಗಂಗಮ್ಮ ದೇವಿ ದೇವಾಲಯದಲ್ಲಿ ಇಂದು ಗೌರಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಿದ್ರು. ಮಹಿಳೆಯರು ಅರಿಶಿಣ, ಕುಂಕುಮ ಭಾಗ್ನ ವನ್ನ ಕೊಟ್ಟು ಹಬ್ಬಕ್ಕೆ ಮತ್ತಷ್ಟು ಮೆರಗು ತಂದ್ರು. ಅಷ್ಟೇ ಅಲ್ಲದೆ ದೇವಾಲಯದಲ್ಲೂ ಕೂಡ ದೇವಿಗೆ ವಿಶೇಷ ಅಲಂಕಾರ ಮಾಡಿದ್ರು. ಒಟ್ನಲ್ಲಿ ನಾಳೆಯ ಗೌರಿ,ಗಣೇಶ ಹಬ್ಬಕ್ಕೆ ಸಿಲಿಕಾನ್ ಸಿಟಿಯ ಮಂದಿ ಸಜ್ಜಾಗಿದ್ದು, ಸಕಲ ಸಿದ್ದತೆಯನ್ನೂ ಮಾಡಿಕೊಂಡಿದ್ದಾರೆ. ಆದ್ರೆ, ಪಿಓಪಿ ಗಣೇಶನನ್ನ ಪೂಜಿಸಿ ಕೆರೆಗಳನ್ನ ಹಾಳು ಮಾಡದೇ ಪರಿಸರ ಸ್ನೇಹಿ ಗಣೇಶನನ್ನ ಪೂಜಿಸಿ ಅನ್ನೋದು  ನಮ್ಮ  ಕಳಕಳಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ