ಹಗರಣ ನಡದಿದ್ರೆ ತನಿಖಾ ವರದಿ ಬಹಿರಂಗ ಮಾಡಿ ಎಂದು ಸಿಟಿ ರವಿ ಸವಾಲ್

ಭಾನುವಾರ, 21 ಮೇ 2023 (19:50 IST)
ಬಿಜೆಪಿ‌ ಸರ್ಕಾರದ ಹಗರಣಗಳ ತನಿಖೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಬಿಜೆಪಿ ಕಛೇರಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
 
ಟೈಂ‌ ಬಾಂಡ್ ಫಿಕ್ಸ್ ಮಾಡಿ , ಟೈಂ ಬಾಂಡ್‌ನೊಳಗೆ ತನಿಖೆ ನಡೆಸಿ ಸತ್ಯ ಏನು ಸುಳ್ಳು ಏನು ಅಂತ ಗೊತ್ತಾಗುತ್ತೆ.ಹಗರಣ ನಡದಿದ್ರೆ ತನಿಖಾ ವರದಿ ಬಹಿರಂಗ ಮಾಡಿ.ಅರ್ಕಾವತಿ ಡಿನೋಟಿಫೈ ಪ್ರಕರಣದ ಬಗ್ಗೆಯೂ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿ.ಅದು ರೆಡಿ ಕೇಕ್ ಅದು, ಕೆಂಪಣ್ಣ ಆಯೋಗ ವರದಿ ಕೊಟ್ಟಿದೆ.ಅದರ ಬಗ್ಗೆಯೂ ರಾಜ್ಯದ ಜನತೆಗೆ ಗೊತ್ತಾಗಬೇಕು.ಆ ಕೇಸಿನ ಎಂಟು ಸಾವಿರ ಕೋಟಿ ಬಂದ್ರೆ ಕೋಟ್ಯಾಂತರ ಜನರಿಗೆ ಅನುಕೂಲ ಆಗುತ್ತೆ.ಇತ್ತ ತಪ್ಪಿತಸ್ಥರನ್ನ ಜೈಲಿಗೂ ಹಾಕಬಹುದು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
 
ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಕೂಡ ಸಿಟಿ ರವಿ ಸವಾಲ್ ಹಾಕಿದ್ದಾರೆ.ಗ್ಯಾರಂಟಿಗಳ ಬಗ್ಗೆ ಈಗ ಬೇರೆ ಬೇರೆ ಸಮುಜಾಯಿಷಿ ನೀಡ್ತಿದ್ಧಾರೆ.ಎಲ್ಲಾ ಭಾಷಣಗಳಲ್ಲೂ ಎಲ್ಲಾ ನಿರುದ್ಯೋಗಿಗಳಿಗೆ ಮೂರು ಸಾವಿರ ಕೊಡ್ತೀವಿ ಅಂದಿದ್ರು.ಈಗ ಖಾಸಗಿ ನೌಕರರಾಗಿದ್ರೆ, 2022-23 ಸಾಲಿನ ಅಂತ ಹೇಳ್ತಾರೆ.ಒಂದು ದಿನಕ್ಕೆ ಬಣ್ಣ ಬದಲಾಯಿಸಿದ್ಧಾರೆ.ಇನ್ನ ದಿನಕಳೆದಂತೆ ಎಷ್ಟು ಬಣ್ಣ ಬದಲಾಯಿಸುತ್ತಾರೋ,ನುಡಿದಂತೆ ನಡೆಯಿರಿ ಅಂತ ನಾವು ಹೇಳ್ತೀವಿ.ರಾಜ್ಯದ ಜನತೆ ಕರೆಂಟ್ ಬಿಲ್ ಕಟ್ಟಬೇಡಿ , ಕೇಳಿದ್ರೆ ಸಿಎಂಗೆ ಕಳಿಸಿ.ಯಾರೂ ಬಿಲ್ ಕಟ್ಟಬಾರದು ಎಂದು ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ