40% ಕಮಿಷನ್ ಜೊಲ್ಲು ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ಸಿ.ಟಿ ರವಿ ಟಾಂಗ್

ಸೋಮವಾರ, 19 ಸೆಪ್ಟಂಬರ್ 2022 (20:11 IST)
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಶೇ.40ರಷ್ಟು ಕಾಮಿ ಜೊಲ್ಲು ಸುರಿಸುತ್ತಿದ್ದಾರೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿಟಿ ರವಿ ಟಾಂಗ್ ಕೊಟ್ಟಿದ್ದಾರೆ. ಪ್ರಿಯಾಂಕ ಖರ್ಗೆಯವರಿಗೆ ತನ್ನ ಕಾಲದಲ್ಲಿ ಆಗಿದ್ರೆ ಇನ್ನೂ ಜಾಸ್ತಿ ಕಮಿಷನ್ ಸಿಗಬಹುದಿತ್ತೇನೋ ಅಂತಾ ಜೊಲ್ಲು ಸುರಿಸಿದ್ರು ಅನಿಸುತ್ತೆ. 40 -50 ವರ್ಷದಿಂದ ಯಾವ ಪ್ರಮಾಣದಲ್ಲಿ ಜೊಲ್ಲು ಸುರಿಸಬಹುದೆಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಇನ್ನು ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಮಾತನಾಡಿದ ರವಿ ಇದು ಭಾರತೀಯತೆಯನ್ನ ಜೋಡಿಸೋ ಉದ್ದೇಶ ಅಲ್ಲ. ಹಿಂದು ಮತ್ತು ಹಿಂದುತ್ವದ ಬಗ್ಗೆ ದ್ವೇಷದ ಭಾಷಣ ಮಾಡೋದು, ಚುನಾವಣಾ ಸಮಯದಲ್ಲಿ ನಾನು ಹಿಂದು ಎಂದು ಹೇಳುತ್ತೇನೆ ಎಂದು ಕಿಚಾಯಿಸಿದ್ರು. ಸಚಿವ ಎಸ್‌ಟಿ ಸೋಮಶೇಖರ್ ವಿರುದ್ಧ ತನಿಖೆಗೆ ಲೋಕಾಯುಕ್ತ ಸಿಎಂ ಅನುಮತಿ ಕೇಳಿರೋ ವಿಚಾರವಾಗಿ ಕೇಳಿದ್ದಕ್ಕೆ ಸಂಬಂಧ ಪಟ್ಟಂತೆ ಸರಿಯಾದ ಮಾಹಿತಿ ಇಲ್ಲ, ಮಾಹಿತಿ ಸಿಕ್ಕ ನಂತರ ಮಾತನಾಡುತ್ತೇನೆ ಎಂದು ನುಣುಚಿಕೊಂಡ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ