ಗಾಳಿ ಪಟಕ್ಕೆ ಸಿವಿಲ್ ಇಂಜಿನಿಯರ್ ಬಲಿ

ಶನಿವಾರ, 17 ಆಗಸ್ಟ್ 2019 (18:19 IST)
ಗಾಳಿ ಪಟದಿಂದಾಗಿ ಯುವ ಸಿವಿಲ್ ಇಂಜಿನಿಯರ್ ನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಮಾಂಜಾ ದಾರದಿಂದ ಹಾರುತ್ತಿದ್ದ ಗಾಳಿಪಟ ಯುವಕನನ್ನು ಬಲಿಪಡೆದುಕೊಂಡಿದೆ. ಸ್ಕೂಟರ್ ನಲ್ಲಿ ತನ್ನಿಬ್ಬರು ಸಹೋದರಿಯರೊಂದಿಗೆ 28 ವರ್ಷದ ಸಿವಿಲ್ ಇಂಜಿನಿಯರ್ ತೆರಳುತ್ತಿದ್ದರು.

ಆಗ ಮಾರ್ಗಮಧ್ಯದಲ್ಲಿ ಹುಡುಗರ ಗುಂಪೊಂದು ಮಾಂಜಾ (ಗಾಜಿನ ಚೂರು ಬಳಸಿ ಮಾಡಿರೋ ದಾರ) ದಾರದಿಂದ ಗಾಳಿ ಪಟ ಹಾರಿಸುತ್ತಿತ್ತು. ಮಾಂಜಾ ದಾರ ಇಂಜಿನಿಯರ್ ನ ಕುತ್ತಿಗೆ ಸಿಲುಕಿದ ಪರಿಣಾಮ ರಕ್ತ ಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ. ದೆಹಲಿಯಲ್ಲಿ ಈ ಘಟನೆ ನಡೆದಿದೆ.

ಗಾಳಿ ಪಟಕ್ಕೆ ಮಾಂಜಾ ದಾರದಿಂದಾಗಿ ಹಲವರು ಗಾಯಗೊಂಡಿರೋ ಘಟನೆಯೂ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ