ಸಾಕು ಮಕ್ಕಳನ್ನ ಕೋರ್ಟ್‌ಗೆ ಕರೆತಂದ CJI

ಭಾನುವಾರ, 6 ಆಗಸ್ಟ್ 2023 (19:41 IST)
ಅಪರೂಪದ ಗಳಿಗೆಗೆ ಸುಪ್ರೀಂಕೋರ್ಟ್‌ ಸಾಕ್ಷಿಯಾಗಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ತಮ್ಮ ಇಬ್ಬರು ಸಾಕು ಪುತ್ರಿಯರೊಂದಿಗೆ ಕೋರ್ಟ್‌ಗೆ ಆಗಮಿಸಿ, ಅವರಿಗೆ ನ್ಯಾಯಾಲಯದ ಕಾರ್ಯಕಲಾಪಗಳನ್ನ ವಿವರಿಸಿದ್ರು. ಈ ಮೂಲಕ ಅಲ್ಲಿದ್ದ ನ್ಯಾಯಮೂರ್ತಿಗಳು ಹಾಗೂ ವಕೀಲರಿಗೆ ಅಚ್ಚರಿ ಮೂಡಿಸಿದ್ರು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ 16 ವರ್ಷದ ಮಾಹಿ, 20 ವರ್ಷದ ಪ್ರಿಯಾಂಕಾ ಎಂಬ ಇಬ್ಬರು ಸಾಕು ಪುತ್ರಿಯರಿದ್ದಾರೆ. ಇಬ್ಬರೂ ಕೂಡ ವಿಶೇಷ ಚೇತನರು. ಸುಪ್ರೀಂಕೋರ್ಟ್‌ ಕಾರ್ಯಕಲಾಪಗಳನ್ನ ನೋಡುವ ಇಂಗಿತ ವ್ಯಕ್ತಪಡಿಸಿದ್ರು. ಈ ಹಿನ್ನೆಲೆಯಲ್ಲಿ ಮಕ್ಕಳ ಕುತೂಹಲ ತಣಿಸುವ ಉದ್ದೇಶದಿಂದ ಚಂದ್ರಚೂಡ್‌ ಅವರು ಮಕ್ಕಳಿಬ್ಬರನ್ನೂ ನಿನ್ನೆ ಬೆಳಗ್ಗೆ 10 ಗಂಟೆಗೆ ಕರೆದುಕೊಂಡು ಬಂದು ಪ್ರೇಕ್ಷಕರ ಗ್ಯಾಲರಿ ಮೂಲಕ ಕೋರ್ಟ್‌ ಕೊಠಡಿ ತೋರಿಸಿ, ಕೋರ್ಟ್ ಕಾರ್ಯ ನಿರ್ವಹಣೆ ಬಗ್ಗೆ ವಿವರಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ