ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹಾಲಪ್ಪಗೆ ಕ್ಲಿನ್ ಚಿಟ್

ಗುರುವಾರ, 17 ಆಗಸ್ಟ್ 2017 (17:19 IST)
ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಹರತಾಳ ಹಾಲಪ್ಪಗೆ ಕೋರ್ಟ್ ಕ್ಲಿನ್ ಚಿಟ್ ನೀಡಿ ದೋಷಮುಕ್ತಗೊಳಿಸಿದೆ.
ಶಿವಮೊಗ್ಗದ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಹರತಾಳ ಹಾಲಪ್ಪ ನಿರಪರಾಧಿ ಎಂದು ಮಹತ್ವದ ತೀರ್ಪು ನೀಡಿರುವುದು ಹಾಲಪ್ಪ ಅವರಿಗೆ ಬಿಗ್ ರಿಲೀಫ್ ದೊರೆತಂತಾಗಿದೆ.
 
ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ತೀರ್ಪು ಪ್ರಕಟಿಸಿದ್ದು ಅತ್ಯಾಚಾರ ಆರೋಪದಿಂದ ಹಾಲಪ್ಪ ಖುಲಾಸೆಯಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ  ತೀರ್ಪಿನಿಂದಾಗಿ ತೆರೆ ಬಿದ್ದಂತಾಗಿದೆ.
 
ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದ ಹಾಲಪ್ಪ ಪ್ರಕರಣದಿಂದಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜಕೀಯಕ್ಕೆ ತುಂಬಲಾರದಂತಹ ನಷ್ಟ ಎದುರಿಸಬೇಕಾಗಿ ಬಂದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ