ಸಿ.ಎಂ ಬೊಮ್ಮಾಯಿ ಸಂಘ ಪರಿವಾರದ ರಾಜ್ಯ ಸಂಚಾಲಕರಂತೆ ನೆಡೆದುಕೊಳ್ಳುತ್ತಿದ್ದಾರೆ: ಅಶ್ರಫ್
ಬುಧವಾರ, 20 ಅಕ್ಟೋಬರ್ 2021 (21:08 IST)
ಬೆಂಗಳೂರು: ಸಿಎಂ ಬೊಮ್ಮಾಯಿ ತಮ್ಮ ಸ್ಥಾನದ ಘನತೆ ಮರೆತಿದ್ದಾರೆ, ಅವರು ಭಜರಂಗದಳದ ರಾಜ್ಯ ಸಂಚಾಲಕಂತೆ ನಡೆದುಕೊಳ್ಳುತ್ತಿದ್ದಾರೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದೆ ಎಂದು ಗುಂಡಾಗಳ ರೀತಿಯಲ್ಲಿ ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ರಾಜ್ಯದಲ್ಲಿ ಸಂಘ ಪರಿವಾರದ ಮೂಲಕ ತಲವಾರು ಪ್ರದರ್ಶನ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇನ್ನೊಂದು ಧರ್ಮವನ್ನು ನಿಂದನೆ ಮಾಡಲಾಗುತ್ತಿದೆ ಎಂದು ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಅಶ್ರಫ್ ದೂರಿದರು.
ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಪ್ರದರ್ಶಿಸಿದ ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಯ ಗಂಭೀರ ನಿರ್ಲಕ್ಷ್ಯ ವಹಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಬುಧವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪಿಎಫ್ಐ ರಾಜ್ಯ ಕಾರ್ಯದರ್ಶಿ ಏ.ಕೆ ಅಶ್ರಫ್ ಈಟಿವಿ ಭಾರತದ ಜೊತೆ ಮಾತನಾಡಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅನೈತಿಕ ಪೊಲೀಸ್ ಗಿರಿ, ದೌರ್ಜನ್ಯ ನಡೆಯುತ್ತಿದೆ. ಯುಪಿ ಮಾದರಿಯಲ್ಲಿ ರಾಜ್ಯದಲ್ಲಿ ಗುಂಡಾಗಿರಿ ನಡೆಯುತ್ತಿದೆ. ರಾಜ್ಯದ ಸಿಎಂ ಯಾರದ್ದೊ ಕಡೆಯಿಂದ ಬೆನ್ನು ತಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿದರು.
ಕೊಲೆ ಮಾಡುತ್ತೇವೆ ಎಂಬ ಹೇಳಿಕೆಗಳು ಕೂಡ ಹೊರ ಬರುತ್ತಿವೆ. ಗದಗ ದಲ್ಲಿ ಸಾಕಷ್ಟು ಇತಿಹಾಸವಿರುವ ಮಸೀದಿಯನ್ನು ಹೊಡೆದುಹಾಕಿ ಎಂದು ಹೇಳಿಕೆ ಕೊಡುತ್ತಾರೆ. ಆದರೆ ಅಲ್ಲಿಯ ಜನ ಪ್ರತಿನಿಧಿಗಳು ಪೊಲೀಸ್ ಠಾಣೆಗೆ ಹೋಗಿ ಆರೋಪಿಗಳನ್ನು ಬಿಡಿಸಿಕೊಂಡು ಬರ್ತಾರೆ. ಗಂಗೊಳ್ಳಿಯಲ್ಲಿಯೂ ಕೂಡ ಮಸೀದಿ ಮುಂದೆ ಪ್ರಚೋದನೆ ನೀಡುವ ಘಟನೆಗಳು ನಡೆದಿವೆ. ರಾಜ್ಯಾದ್ಯಂತ ಸಂಘ ಪರಿವಾರದವರು ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ತ್ರಿಶೂಲ ಧೀಕ್ಷೆ ನೀಡಲಾಗಿದೆ, ಆ ಮೂಲಕ ತ್ರಿಶೂಲ್ ಹಂಚಲಾಗುತ್ತಿದೆ.
ಯಡಿಯೂರಪ್ಪ ಸಿಎಂ ಆಗಿದ್ದರೂ ಪ್ರಸ್ತುತ ಸಿ.ಎಂ ಬೊಮ್ಮಾಯಿ ರೀತಿಯಲ್ಲಿ ಕೆಳಮಟ್ಟಿಗೆ ಇಳಿದಿರಲಿಲ್ಲ ತಮ್ಮ ಬೇಳೆ ಬೈಸಿಕೊಳ್ಳಲು ಬೊಮ್ಮಾಯಿ ಸಂಘ ಪರಿವಾರದವರನ್ನು ಮೆಚ್ಚಿಸಲು ಮುಂದಾಗಿದ್ದಾರೆ. ಇವೆಲ್ಲ ಕಾರಣಕ್ಕೆ ಪಿ.ಎಫ್.ಐ ನಿಂದ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ, ರಾಜ್ಯದ ಪ್ರತಿ ಮನೆಗೆ ತೆರಳುತ್ತೇವೆ, ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಜಾಗೃತಿ ನಡೆಸುತ್ತೇವೆ ಎಂದು ಹೇಳಿದರು.
ಸಂಘ ಪರಿವಾರದ ಕೇಸರಿ ವಸ್ತ್ರ:
ಪೊಲೀಸ್ ಕೇಸರಿ ಶ್ಯಾಲು ಧರಿಸಿದ ಪ್ರಕರಣದ ಸಂಬಂಧ ಮಾತನಾಡುವ ಕೇಸರಿ ವಸ್ತ್ರವನ್ನು ಸಂಘ ಪರಿವಾರ ತನ್ನದು ಎಂದು ಬಿಂಬಿಸಿಕೊಂಡಿದೆ. ಆ ವಸ್ತ್ರಗಳನ್ನು ಬಳಸಿ ಧರಿಸಬಾರದು. ಪೊಲೀಸ್ ಠಾಣೆಗಳು ಸರ್ಕಾರದ ಭಾಗವಾಗಿರುತ್ತವೆ. ಉದಾಹರಣೆಗೆ ಈ ಪ್ರಕರಣಗಳನ್ನು ಸಹ ಖಂಡದ ಬಳಕೆ ಎಂದು ಅಶ್ರಫ್ ಸಮಯ.