6 ತಿಂಗಳಿನಿಂದ ಅಪ್ಪ, ಅಮ್ಮನ ಭೇಟಿಯಾಗಿಲ್ಲ, ಶಿಕ್ಷೆ ಕಡಿಮೆಗಾಗಿ ಜಡ್ಜ್‌ ಮುಂದೆ ಪ್ರಜ್ವಲ್ ಕಣ್ಣೀರು

Sampriya

ಶನಿವಾರ, 2 ಆಗಸ್ಟ್ 2025 (17:23 IST)
ಬೆಂಗಳೂರು: ಅತ್ಯಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಕ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ಆದೇಶವನ್ನು ಜನಪ್ರತಿನಿಧಿಯ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. 

ಇನ್ನೂ ಕೋರ್ಟ್ ಮುಂದೆ ಅಪರಾಧಿ ಪ್ರಜ್ವಲ್ ರೇವಣ್ಣ ಕಡಿಮೆ ಶಿಕ್ಷೆ ವಿಧಿಸುವಂತೆ ಬೇಡಿಕೊಂಡು, ಕಣ್ಣೀರು ಹಾಕಿದ ಘಟನೆ ಸಂಭವಿಸಿತು. 

ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇಂದು ಕೋರ್ಟ್ ಮುಂದೆ  ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಗೋಗರೆದಿದ್ದಾನೆ. 

ರಾಜಕೀಯದಲ್ಲಿ ವೇಗವಾಗಿ ಬೆಳೆಯುತ್ತಿರುವುದೇ ನನ್ನ ಏಕೈಕ ತಪ್ಪು.ತನಗೆ ಕಡಿಮೆ ಶಿಕ್ಷೆಯನ್ನು ವಿಧಿಸುವಂತೆ ಕೋರಿದರು. 

ಅಮಾನತುಗೊಂಡಿರುವ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಶುಕ್ರವಾರ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದು, ಜೀವವಾಧಿ ಶಿಕ್ಷೆಯನ್ನು ವಿಧಿಸಲಾಯಿತು. 

ನಾನು ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದೇನೆ ಎಂದು ಅವರು ಹೇಳುತ್ತಾರೆ, ಆದರೆ ಯಾವುದೇ ಮಹಿಳೆಯರು ದೂರು ನೀಡಲು ಸ್ವಯಂಪ್ರೇರಣೆಯಿಂದ ಹೊರಬಂದಿಲ್ಲ, ಅವರು ಚುನಾವಣೆಗೆ ಆರು ದಿನಗಳ ಮೊದಲು (ಕಳೆದ ಲೋಕಸಭೆ ಚುನಾವಣೆ) ಬಂದರು.ಪ್ರಾಸಿಕ್ಯೂಷನ್ ಕಡೆಯವರು ಉದ್ದೇಶಪೂರ್ವಕವಾಗಿ ಅವರನ್ನು ಕರೆತಂದು ದೂರು ನೀಡುವಂತೆ ಮಾಡಿದ್ದಾರೆ ಎಂದು ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.

ತಾನು ಬಿಇ ಮೆಕ್ಯಾನಿಕಲ್ ಪದವೀಧರನಾಗಿದ್ದು, ಯಾವಾಗಲೂ ಮೆರಿಟ್‌ನಲ್ಲಿ ಉತ್ತೀರ್ಣನಾಗಿದ್ದೆ. ದಯವಿಟ್ಟು ನನಗೆ ಕಡಿಮೆ ಶಿಕ್ಷೆಯನ್ನು ನೀಡಿ ಎಂದು ನಾನು ನ್ಯಾಯಾಲಯವನ್ನು ಕೋರುತ್ತೇನೆ ಎಂದು ಪ್ರಜ್ವಲ್ ಹೇಳಿದರು. 

ಆರು ತಿಂಗಳಿಂದ ತಂದೆ ಮತ್ತು ತಾಯಿ ಸೇರಿದಂತೆ ಅವರ ಕುಟುಂಬವನ್ನು ಭೇಟಿ ಮಾಡಿಲ್ಲ ಎಂದು ಉಲ್ಲೇಖಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ