ಪರಿಸರ ಸ್ವಚ್ಛವಾಗಿಡುವಂತೆ ಸಿಎಂ ಕರೆ
ಪ್ರತಿಯೊಬ್ಬರೂ ನಮ್ಮ ಪರಿಸರವನ್ನ ಚೊಕ್ಕವಾಗಿ ಇಟ್ಟಿಕೊಳ್ಳುವ ಕೆಲಸ ಮಾಡ್ಬೇಕು.. ಆ ಜವಾಬ್ದಾರಿ ಎಲ್ಲರಿಗೂ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪರಿಸರದ ಸಮಸ್ಯೆ ನಿಯಂತ್ರಿಸುವ, ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಜೂನ್ 5ರಂದು ಎಲ್ಲಾ ಕಡೆ ಪರಿಸರ ದಿನಾಚರಣೆ ಮಾಡ್ತೀವಿ.. ಇದರ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದು ತಿಳಿಸಿದ್ರು.. ನಾವು ಎಷ್ಟೇ ಆದೇಶ, ನಿಯಮಗಳನ್ನು ಜಾರಿಗೊಳಿಸಿದ್ರೂ ಜನರಲ್ಲಿ ಜಾಗೃತಿ ಬರಬೇಕು.. ನಾವು ಪ್ರಕೃತಿಯನ್ನ ಪ್ರೀತಿಸಬೇಕು, ಭೂಮಿ ತಾಯಿಯನ್ನ ಪ್ರೀತಿಸಬೇಕು. ಅದನ್ನ ಪ್ರತಿಯೊಬ್ಬರೂ ಕರ್ತವ್ಯ ಅಂತ ಭಾವಿಸಬೇಕು.. ನಮಗೆಲ್ಲ ಜೀವನ ಕೊಟ್ಟಿರುವುದು ಪ್ರಕೃತಿ ಮತ್ತು ಭೂಮಿ. ಪ್ರಕೃತಿ ಮತ್ತು ಭೂಮಿ ಉಪಯೋಗದಿಂದ ನಾವು ಬದುಕುತಿದ್ದೇವೆ ಎಂದರು.