ಸಿಎಂ ನಮ್ಮ ಮನೆಗೆ ಬರುವುದು ಹೊಸತಲ್ಲ: ಔತಣಕೂಟದ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ

Sampriya

ಶುಕ್ರವಾರ, 3 ಜನವರಿ 2025 (16:09 IST)
Photo Courtesy X
ಬೆಳಗಾವಿ: ನಾವು ಔತಣಕೂಟ ನಡೆಸುತ್ತಿರುವುದು ಇದು ಮೊದಲೇನಲ್ಲ ಎಂದು ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಔತನಕೂಟದ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಔತಣಕೂಟ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ 20 ತಿಂಗಳಲ್ಲಿ ಹತ್ತು ಬಾರಿ ಸೇರಿ ಚರ್ಚಿಸಿದ್ದೇವೆ. ಹೀಗಿರುವಾಗ ಈ ಸಭೆಗೆ ಮಹತ್ವ ನೀಡಬೇಕಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮನೆಗೆ ಬರುವುದು ಹೊಸತಲ್ಲ. ನಾವು ಅವರ ಮನೆಗೆ ಹೋಗುತ್ತೇವೆ. ಅವರೂ ನಮ್ಮ ಮನೆಗೆ ಬರುತ್ತಾರೆ. ಸಿಎಂ ಜತೆಗೆ ಎಲ್ಲ ಸಚಿವರು ಮಾತನಾಡಬೇಕು ಅಂದಿದ್ದರು. ಹಾಗಾಗಿ ಹೊಸ ವರ್ಷದ ಸಂದರ್ಭದಲ್ಲಿ ಸೇರಿದ್ದೇವೆ. ಅಲ್ಲಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸುಧಾರಿಸಿ, 2028ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ವಿಚಾರವಾಗಿ ಚರ್ಚಿಸಲಾಗಿದೆಯೇ ಹೊರತು. ಸಂಪುಟ ಪುನರ್‌ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚಿಸಿಲ್ಲ ಎಂದರು.

ಸಭೆಯಲ್ಲಿ ಅಹಿಂದ ನಾಯಕರಷ್ಟೇ ಸೇರಿದ್ದೇಕೆ ಎಂಬ ಪ್ರಶ್ನೆಗೆ, ತುರ್ತಾಗಿ ಸಭೆ ನಿಗದಿಯಾಯಿತು. ಹಾಗಾಗಿ ತ್ವರಿತವಾಗಿ ಲಭ್ಯವಿರುವ ಕೆಲವರು ಸೇರಿದೆವು. ಪ್ರವಾಸ ಮತ್ತಿತರ ಕಾರಣಕ್ಕೆ ಕೆಲವರಿಗೆ ಹಾಜರಾಗಲು ಸಾಧ್ಯವಿಲ್ಲ. ಹಾಗಾಗಿ ಇದಕ್ಕೆ ರಾಜಕೀಯ ಮಹತ್ವ ನೀಡಬೇಕಿಲ್ಲ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ