ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಮುಹೂರ್ತ ಫಿಕ್ಸ್‌, ಜಮೀರ್ ಅಹ್ಮದ್ ಏನಂದ್ರು

Sampriya

ಗುರುವಾರ, 2 ಜನವರಿ 2025 (16:24 IST)
ಹೊಸಪೇಟೆ: ಈ ಬಾರಿಯ ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ಫೆಬ್ರವರಿ 28 ರಿಂದ ಮೂರು ದಿನಗಳ ಕಾಲ ನಡೆಸಲು ಸರ್ಕಾರ ಸಮ್ಮತಿ ಸೂಚಿಸಿದೆ. ಬೆಂಗಳೂರಿನಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ ಎಂದು ಜಮೀರ್ ಅಹ್ಮದ್ ಅವರು ವಿವರಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಜಮೀರ್ ಅವರು, ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಸಮ್ಮತಿ ಪಡೆದಿದ್ದಾರೆ. ಫೆ. 28 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ಉತ್ಸವ ಉದ್ಘಾಟನೆ ಮಾಡಲಿದ್ದಾರೆ.

ಮಾ.01 ಮತ್ತು 02 ರಂದು ಕಾರ್ಯಕ್ರಮ ನಡೆಯಲಿದೆ. ಮಾ.02 ರಂದು ಸಮಾರೋಪ ಕೂಡ ನಡೆಯಲಿದೆ. ಹಂಪಿ ಉತ್ಸವ ಕ್ಕೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಉಸ್ತುವಾರಿ ಸಚಿವ ಸೂಚನೆ ನೀಡಿದ್ದಾರೆ ಎಂದರು.

ಈ ಬಾರಿಯೂ ಅದ್ಧೂರಿ ಹಾಗೂ ಸಂಪ್ರದಾಯವಾಗಿ ಹಂಪಿ ಉತ್ಸವ ಆಚರಿಸಲಾಗುವುದು.  ಕಳೆದ ವರ್ಷ ಪೆಬ್ರುವರಿ 2ರಿಂದ 4ರವರೆಗೆ ಹಂಪಿ ಉತ್ಸವ ನಡೆದಿತ್ತು. ಈ ವರ್ಷ ಬಹುತೇಕ ಒಂದು ತಿಂಗಳು ವಿಳಂಬವಾಗಿ ಉತ್ಸವ ನಡೆಯುತ್ತಿದೆ. ಮಾರ್ಚ್ ತಿಂಗಳು ಬಿರು ಬೇಸಿಗೆಯ ಸಮಯ ಆಗಿದ್ದರೈ ಕಾರ್ಯಕ್ರಮಗಳು ನಡೆಯುವುದು ಸಂಜೆ ಹೊತ್ತಲ್ಲಿ. ಹೀಗಾಗಿ ಯಾವುದೇ ಸಮಸ್ಯೆ ಆಗದು ಎಂದರು.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ