ಕನ್ನಂಬಾಡಿ ಆಣೆಕಟ್ಟೆಗೆ ಸಿಎಂ ಬಾಗಿನ ಅರ್ಪಣೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಕನ್ನಂಬಾಡಿ ಅಣೆಕಟ್ಟೆಗೆ ಬಾಗಿನ ಸಮರ್ಪಣೆಯಾಗಲಿದೆ.
ಬಾಗಿನ ಸಮಾರಂಭದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ರೈತ ಬಾಂಧವರು ಮತ್ತು ಕಾರ್ಯಕರ್ತರು ಭಾಗವಹಿಸಲು ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದಿಂದ ಕೋರಲಾಗಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಆಗಸ್ಟ್ 29 ರ ಬೆಳಿಗ್ಗೆ 11ಗಂಟೆಗೆ ಕೃಷ್ಣರಾಜಸಾಗರ ಜಲಾಶಯಕ್ಕೆ ಭೇಟಿ ನೀಡಿ
ಭರ್ತಿಯಾಗಿರುವ ಅಣೆಕಟ್ಟೆಗೆ ಪೂಜೆ ಸಲ್ಲಿಸಲಿದ್ದಾರೆ. ತಾಯಿ ಕಾವೇರಿ ಮಾತೆಗೆ ಬಾಗಿನವನ್ನು ಅರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟದ ಸಚಿವರು, ಜಿಲ್ಲೆಯ ಶಾಸಕರು ಹಾಗೂ ರೈತ ಮುಖಂಡರು ಭಾಗವಹಿಸಲಿದ್ದಾರೆ.
ಶಾಸಕ ನಾರಾಯಣಗೌಡರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಮೋಹನ್ ಅವರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ಜನರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.