10 ಲಕ್ಷ ಮನೆ ವಿತರಿಸಿದ ಸಿಎಂ

ಮಂಗಳವಾರ, 31 ಜನವರಿ 2023 (21:03 IST)
ಬೆಂಗಳೂರಿನಲ್ಲಿ ಸಿಎಂ ಬಸವರಾಜ್​ ಬೊಮ್ಮಾಯಿ 10 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ನೀಡಿದರು. ಬಳಿಕ  ಮಾತನಾಡಿದ ಅವರು, ಸೂರು ಪಡೆದ ಎಲ್ಲರಿಗೂ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಪ್ರತಿಯೊಬ್ಬರಿಗೂ ಒಂದು ಸೂರು ತುಂಬಾ ಮುಖ್ಯ. ಪಕ್ಷಿಗಳು ಗೂಡನ್ನ ಕಟ್ಟಿ ಜೀವಿಸುತ್ತವೆ. ಕಾಂಗ್ರೆಸ್​​ ಪಕ್ಷ 6 ವರ್ಷದ ಹಿಂದೆ ಮನೆ ಕಟ್ತೀವಿ ಎಂದು ಘೋಷಣೆ ಮಾಡಿದ್ರು. ಆದ್ರೆ ಅದಕ್ಕೆ ಹಣ ಮೀಸಲಿಟ್ಟಿರಲಿಲ್ಲ. ಆದರೆ ನಾವು 10 ಲಕ್ಷ ಮನೆಗಳನ್ನ ಗುರಿಯಿಟ್ಟುಕೊಂಡು ಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು. ನಾವು ಭರವಸೆ ನೀಡಿದ್ರೆ ಅದನ್ನ ಈಡೇರಿಸುತ್ತಿದ್ದೇವೆ ಎಂದು ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ