ಇಂಗಳೆ‌ಗೆಯನ್ನು ‘ರಜಾ’ ಹತ್ಯೆ ಮಾಡಿದ್ರು- KPCC ವಕ್ತಾರ M. ಲಕ್ಷ್ಣಣ್​​​​

ಮಂಗಳವಾರ, 31 ಜನವರಿ 2023 (20:59 IST)
1988ರಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಸಂಗಡಿಗರು ಅಬಕಾರಿ ಇನ್ಸಪೆಕ್ಟರ್ ಇಂಗಳೆ‌ಗೆಯವರನ್ನು AK 47ನಿಂದ ಶೂಟ್ ಮಾಡಿ ಕೊಲೆ ಮಾಡಿದ್ದರು...ಹೀಗೆಂದು ರಮೇಶ್​ ಜಾರಕಿಹೊಳಿ ವಿರುದ್ಧ KPCC ವಕ್ತಾರ M. ಲಕ್ಷ್ಣಣ್​​​​ ಗಂಭೀರ ಆರೋಪ ಮಾಡಿದ್ದಾರೆ. 1985ರಲ್ಲಿ D.K. ಶಿವಕುಮಾರ್​ ಹರಿದ ಚಪ್ಪಲಿ ಹಾಕಿದ್ದರು ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, 1994ರಲ್ಲಿ ಗೋಕಾಕ್‌ ಸರ್ಕಾರಿ ಮಿಲ್‌ನಲ್ಲಿ ಹತ್ಯಾಕಾಂಡ ನಡೆದಿತ್ತು. ಶಾಸಕ ರಮೇಶ್ ಜಾರಕಿಹೊಳಿ ಹತ್ಯಾಕಾಂಡದ ನೇತೃತ್ವ ವಹಿಸಿದ್ದರು ಎಂದು ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ, ಮಾರಾಟಕ್ಕೆ ಜಾರಕಿಹೊಳಿ ಕುಟುಂಬ ಅನುಮತಿ ಪಡೆಯಬೇಕಿತ್ತು. ಅನುಮತಿ ಪಡೆಯದಿದ್ದರೆ ಅಟ್ರಾಸಿಟಿ, ರೇಪ್ ಪ್ರಕರಣ ದಾಖಲಿಸುತ್ತಾರೆ. ಹೀಗೆ ಸುಮಾರು 300 ಸಾಮಾನ್ಯ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಗೋಕಾಕ್​ ಶಾಸಕ ರಮೇಶ್ ಜಾರಕಿಹೊಳಿ ಕಳ್ಳ ಭಟ್ಟಿ ಸಾರಾಯಿ ಮಾರುತ್ತಿದ್ದರು. 1985ರಲ್ಲಿ ಜಾರಕಿಹೊಳಿ ಎರಡು ಕಾಲಿಗೆ ಬೇರೆ ಬೇರೆ ಚಪ್ಪಲಿ ಹಾಕಿಕೊಂಡಿದ್ದರು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ