ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಶುಕ್ರವಾರ, 27 ಡಿಸೆಂಬರ್ 2019 (10:30 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಬಜೆಟ್ ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದ ಹಿನ್ನಲೆಯಲ್ಲಿ ಹೈಕಮಾಂಡ್ ನಾಯಕರು ಭೇಟಿಗೆ ಅವಕಾಶ ನೀಡುತ್ತಿಲ್ಲ. ಈ ಹಿನ್ನಲೆಯಲ್ಲಿ  ಸಿಎಂ ಯಡಿಯೂರಪ್ಪ ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿದ್ದಾರೆ. ಅಲ್ಲದೇ ಈ ಬಾರಿಯ ಬಜೆಟ್ ಭಾರೀ ಚಾಲೆಂಜ್ ಆಗಿರೋ ಹಿನ್ನಲೆ ಬಿಎಸ್ ವೈ ಬಜೆಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ.


ಉತ್ತರ ಕರ್ನಾಟಕದ ಪ್ರವಾಹಕ್ಕೆ ಹೆಚ್ಚು ಮಹತ್ವ ನೀಡಬೇಕು. ಹಾಗೇ ಮಲೆನಾಡು, ಕರಾವಲಿ ಭಾಗದ ಕಡೆಯೂ ಗಮನ ಕೊಡಬೇಕು. ಬರ ಆವರಿಸಿರುವ ತಾಲೂಕುಗಳ ಬಗ್ಗೆಯೂ ಗಮನ ಕೊಡಬೇಕು, ಜನಪ್ರಿಯ ಯೋಜನೆ ನೀಡುವ ಮೂಲಕ ಜನರ ಮನ ಗೆಲ್ಲಬೇಕು. ಆದಕಾರಣ ಸಿಎಂ ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ