ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಶುಕ್ರವಾರ, 27 ಡಿಸೆಂಬರ್ 2019 (09:57 IST)
ಬೆಂಗಳೂರು : ಕನಕಪುರದಲ್ಲಿ ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ  ಶಿಲಾನ್ಯಾಸ ಹಿನ್ನಲೆ ಸಂಸದ ಅನಂತಕುಮಾರ್ ಹೆಗಡೆ ಡಿಕೆಶಿಗೆ ಟಾಂಗ್ ನೀಡಿದ್ದಾರೆ.ಈ ಬಗ್ಗೆ ಟ್ವಿಟ್ ಮಾಡಿರುವ ಅನಂತಕುಮಾರ್ ಹೆಗಡೆ , “ಇಲ್ಲೊಬ್ಬ ತಿಹಾರಿ ರಿಟರ್ನ್  ಮಹನೀಯರೋಬ್ಬರು ಯಾವುದೋ ಹುದ್ದೆಯ ಆಸೆಯೊಂದಿಗೆ, ಅವರ ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು ಅತಿ ದೊಡ್ಡ ಯೇಸುವಿನ ಪ್ರತಿಮೆ ಸ್ಥಾಪಿಸಿ ತಮ್ಮ ಪೌರುಷವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.


ಓಲೈಕೆಯ ರಾಜಕೀಯಕ್ಕೆ ಪೈಪೋಟಿ ನೀಡಲು ಕಾಂಗ್ರೆಸ್ ನಲ್ಲಿ ಇನ್ನು ಹೆಚ್ಚಿನ ಗುಲಾಮರು ಅಖಾಂಡಕ್ಕೆ ಇಳಿದರು ಅಚ್ಚರಿ ಇಲ್ಲ  ಎಂದು ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ