ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣವಾಗ್ತಿದೆ. ಹೀಗಂತ ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಬಂಧಿತನಾದ ಭಯೋತ್ಪಾದಕ ಮುನೀರ್ ಬಂಧನದ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಜೆಪಿ ಕಾರ್ಯಕರ್ತರು ರಾಮನಗರದಲ್ಲಿ ಪ್ರತಿಭಟನೆ ನಡೆಸಿದ್ರು. ಸಿ.ಎಂ. ಕುಮಾರಸ್ವಾಮಿ ಅವರ ತವರು ಜಿಲ್ಲೆ ರಾಮನಗರ ಇತ್ತೀಚಿನ ದಿನಗಳಲ್ಲಿ ಭಯೋತ್ಪಾಕರ ಅಡಗು ತಾಣವಾಗ್ತಿದೆ. ರಾಜ್ಯದಲ್ಲಿನ ಸಮಿಶ್ರ ಸರ್ಕಾರ ಭಯೋತ್ಪಾದಕರಿಗೆ ಆಶ್ರಯವನ್ನು ನೀಡ್ತಿದೆ. ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡರು ಹಾಗೂ ಸಿ.ಎಂ. ಕುಮಾರಸ್ವಾಮಿ ಅವರು ಇಂತಹ ಭಯೋತ್ಪಾದಕರ ಪರವಾಗಿದ್ದಾರೆಯೇ ಹೊರತು, ರಾಜ್ಯದ ಹಿತವನ್ನು ಕಾಪಾಡುವುದಿಲ್ಲ.
ಕುಮಾರಸ್ವಾಮಿ ಅವರು ಓಟ್ ಬ್ಯಾಂಕಿಗಾಗಿ ಬಾಂಗ್ಲಾ ವಲಸಿಗರಿಗೆ ಆಶ್ರಯವನ್ನು ನೀಡ್ತಿದ್ದಾರೆ. ಸರ್ಕಾರ ಈ ಕೂಡಲೇ ಇಂತಹ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಬೇಕು. ಸಿ.ಎಂ. ಕುಮಾರಸ್ವಾಮಿ ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಕಾರ್ಯಕರ್ತರು ಧಿಕ್ಕಾರವನ್ನು ಕೂಗಿದರು. ರಾಮನಗರ ಜಿಲ್ಲಾಧಿಕಾರಿಗೆ ಮನವಿ ನೀಡಿ, ಕೂಡಲೇ ರಾಮನಗರದಲ್ಲಿರುವ ಬಾಡಿಗೆ ಮನೆಯವರ ಸಂಪೂರ್ಣ ವಿವರವನ್ನು ಕಲೆ ಹಾಕುವಂತೆ ಒತ್ತಾಯ ಮಾಡಿದ್ರು.