ಶಿವಮೊಗ್ಗದಲ್ಲಿ ನಡೆದ ದುರಂತದ ಬಗ್ಗೆ ಸಿಎಂ, ಮಾಜಿ ಸಿಎಂ ಹೇಳಿದ್ದೇನು?
ಮಾಜಿ ಸಿಎಂ ಈ ಬಗ್ಗೆ ಟ್ವೀಟ್ ಮಾಡಿ, ಶಿವಮೊಗ್ಗದಲ್ಲಿ ನಡೆದ ದುರಂತ ತುಂಬಾ ನೋವಿನ ಸಂಗತಿ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಈ ದುರ್ಘಟನೆಯ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಅವಘಡ ಮರುಕಳಿಸಬಾರದಂತೆ ಎಚ್ಚರವಹಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.