ರಾಜ್ಯ ಬಜೆಟ್ ನಲ್ಲಿ ವೃದ್ಧರಿಗಾಗಿ ಬಂಪರ್ ಆಫರ್ ನೀಡಿದ ಸಿಎಂ

ಗುರುವಾರ, 5 ಮಾರ್ಚ್ 2020 (13:20 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ಅವರು ಇಂದು 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆಮಾಡಿದ್ದು, ಇದರಲ್ಲಿ  ವೃದ್ಧರಿಗಾಗಿ ಬಂಪರ್ ಆಫರ್ ವೊಂದನ್ನು ಜಾರಿಗೆ ತಂದಿದ್ದಾರೆ.

ಇಂದಿನ ಬಜೆಟ್ ನಲ್ಲಿ ಜೀವನ ಚೈತ್ರ ಯಾತ್ರೆ ಯೋಜನೆಯಡಿ ತೀರ್ಥಕ್ಷೇತ್ರ ದರ್ಶನಕ್ಕೆ ಅವಕಾಶ ಮಾಡಕೊಡಲಾಗುವುದು . 60 ವರ್ಷ ಮೀರಿದ ಬಡತನ ರೇಖೆಗಿಂತ ಕೆಳಗಿರುವವರಿಗೆ  ಜೀವನ ಚೈತ್ರ ಯಾತ್ರೆ ಯೋಜನೆಯಡಿ ತೀರ್ಥಕ್ಷೇತ್ರ ದರ್ಶನ ಮಾಡಿಸಲಾಗುವುದು.

 

ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ರೈಲ್ವೆ ಇಲಾಖೆ ಸಹಯೋಗದಡಿ ಯೋಜನೆ ಅನುಷ್ಠಾನ ಮಾಡಲಿದ್ದು,  ಜೀವನ ಚೈತ್ರ ಯಾತ್ರೆ ಯೋಜನೆಗೆ 20 ಕೋಟಿ ಮೀಸಲಿಡಲಾಗುವುದು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ