ಡಿವೈಎಸ್ ಪಿ ಗಣಪತಿ ಸಾವು ಪ್ರಕರಣ: ಸಚಿವ ಕೆಜೆ ಜಾರ್ಜ್ ಪರ ಸಿಎಂ ಬ್ಯಾಟಿಂಗ್

ಮಂಗಳವಾರ, 10 ಜುಲೈ 2018 (09:55 IST)
ಬೆಂಗಳೂರು: ಡಿವೈಎಸ್ ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸದನದಲ್ಲಿ ಸಿಎಂ ಕುಮಾರಸ್ವಾಮಿ ಸಚಿವ ಕೆಜೆ ಜಾರ್ಜ್ ಪರವಾಗಿ ಮಾತನಾಡಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಪ್ರಕರಣ ಆದಾಗ ಕೆಜೆ ಜಾರ್ಜ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿ ಇದೀಗ ಅದೇ ಸಚಿವರ ಪರವಾಗಿ ಮಾತನಾಡಿದ್ದಾರೆ.

ಡಿಕೆ ರವಿ, ಡಿವೈಎಸ್ ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ, ಸಿಐಡಿ ತನಿಖಾ ತಂಡಗಳು ಕೆಜೆ ಜಾರ್ಜ್ ಅವರ ಕೈವಾಡ ಇಲ್ಲ ಎಂದು ಕ್ಲೀನ್ ಚಿಟ್ ನೀಡಿದೆ. ಹೀಗಿರುವಾಗ ನಾವು ನಮ್ಮ ನ್ಯಾಯ ಸಂಸ್ಥೆಗಳನ್ನು ಗೌರವಿಸಬೇಕಾಗುತ್ತದೆ.

ಬಿಜೆಪಿಯ ಗೋವಿಂದ ಕಾರಜೋಳ ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಕ್ಕೆ ಉತ್ತರಿಸಿ ಕುಮಾರಸ್ವಾಮಿ ತನಿಖಾ ವರದಿಯಲ್ಲಿ ಏನು ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಿಂದೆ ಒತ್ತಡಕ್ಕೆ ಮಣಿದು ಅವರು ರಾಜೀನಾಮೆ ಸಲ್ಲಿಸಿದ್ದರು. ಈಗ ನ್ಯಾಯಾಲಯದ ತೀರ್ಪು ನಾವೆಲ್ಲರೂ ಗೌರವಿಸಲೇಬೇಕಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ