ಎಲ್ಲಾ DC, CEOಗಳ ಜೊತೆ CM ಸಭೆ
ಕರುನಾಡಿನಲ್ಲಿ ಮಳೆಯಿಂದ ಅವಾಂತರ ಹಿನ್ನೆಲೆ ಇಂದು ಎಲ್ಲಾ ಡಿಸಿ, CEOಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.. ರಾಜ್ಯದೆಲ್ಲೆಡೆ ಮಳೆಯಿಂದ ಅವಾಂತರ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು, ಮಳೆಯಿಂದಾದ ಅನಾಹುತಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.