ಭಕ್ತರ ಕಾಣಿಕೆ ಹಣದಿಂದ ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಸಿದ್ದರಾಮಯ್ಯ ಸೂಚನೆ

Krishnaveni K

ಸೋಮವಾರ, 25 ನವೆಂಬರ್ 2024 (11:41 IST)
ಬೆಂಗಳೂರು: ನಾಡದೇವತೆ ಚಾಮುಂಡೇಶ್ವರಿಗೆ ಭಕ್ತರ ಕಾಣಿಕೆ ಹಣದಿಂದ ಬಂದ ಆದಾಯದಲ್ಲೇ ಚಿನ್ನದ ರಥ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದು ಈ ಬಗ್ಗೆ ಕಂದಾಯ ಇಲಾಖೆಗೂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಚಿನ್ನದ ರಥ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ, ಯಾವ ಆದಾಯ ಬಳಸಿಕೊಳ್ಳಬಹುದು ಎಂಬ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ. ನಾಡದೇವಿಗೆ ಚಿನ್ನದ ರಥ ನಿರ್ಮಿಸಬೇಕು ಎಂಬುದು ಭಕ್ತರ ಒತ್ತಾಸೆಯಾಗಿತ್ತು.

ನಾಡದೇವತೆಯನ್ನು ದಸರಾ ಹಬ್ಬದ ಸಂದರ್ಭದಲ್ಲಿ ಚಿನ್ನದ ರಥದಲ್ಲಿ ಕೂರಿಸಬೇಕು ಎಂಬುದು ಭಕ್ತರ ಬಯಕೆಯಾಗಿದೆ. ಚಾಮುಂಡೇಶ್ವರಿ ದೇವಿಯ ಸನ್ನಿಧಾನಕ್ಕೆ ಕಾಣಿಕೆ ರೂಪದಲ್ಲಿ ಸಾಕಷ್ಟು ಆದಾಯವಿದೆ. ಹೀಗಾಗಿ ಈಗ ಭಕ್ತರ ಕೋರಿಕೆ ಈಡೇರಿಸಲು ಸರ್ಕಾರ ಮೊದಲ ಹೆಜ್ಜೆಯಿಟ್ಟಿದೆ.

ಚಿನ್ನದ ರಥ ನಿರ್ಮಾನಕ್ಕೆ ನೆರವಾಗಲು ಪ್ರತ್ಯೇಕ ಕಾಣಿಕೆ ಹುಂಡಿಯನ್ನೂ ಇಡಲಾಗುತ್ತದೆ. ಇದರಿಂದ ಬಂದ ಆದಾಯದಿಂದ ರಥ ನಿರ್ಮಾಣ ಮಾಡಲಾಗುತ್ತದೆ. ಹುಂಡಿಯಿಂದ ಬಂದ ಹಣ ಸಾಕಾಗದೇ ಇದ್ದರೆ ಸರ್ಕಾರ ಹೆಚ್ಚುವರಿ ಹಣ ಭರಿಸಿ ಚಿನ್ನದ ರಥ ನಿರ್ಮಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ