ದೇವತೆಗಳೇ ಸಾರಾಯಿ ಕುಡಿತಿದ್ರು ಆದ್ರೆ ನಾವು ಹಾಗೆ ಹೇಳಲ್ಲ: ಸಿಎಂ ಸಿದ್ದರಾಮಯ್ಯ

Krishnaveni K

ಗುರುವಾರ, 21 ನವೆಂಬರ್ 2024 (16:14 IST)
ನವದೆಹಲಿ: ಇಂದು ದೆಹಲಿಯಲ್ಲಿ ನಂದಿನಿ ಉತ್ಪನ್ನಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಹಿಂದಿನ ಕಾಲದಲ್ಲಿ ದೇವತೆಗಳೇ ಸಾರಾಯಿ ಕುಡಿತಿದ್ರು ಎಂದಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಇಂದು ದೆಹಲಿಯ ಅಶೋಕ ಹೋಟೆಲ್ ನಲ್ಲಿ ಸಿಎಂ ಸಿದ್ದರಾಮಯ್ಯ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದೆ ದೆಹಲಿಯಲ್ಲೂ ನಂದಿನಿ ಉತ್ಪನ್ನಗಳು ಲಭ್ಯವಾಗಲಿದೆ. ಈ ವೇಳೆ ಮಾತನಾಡಿದ ಅವರು ಹಿಂದಿನ ಕಾಲದಲ್ಲಿ ದೇವತೆಗಳೂ ಸಾರಾಯಿ ಕುಡಿತಿದ್ದರು ಎಂದಿದ್ದಾರೆ.

ಆದರೆ ನಾವು ನಿಮಗೆ ಸಾರಾಯಿ ಕುಡಿಯಿರಿ ಎನ್ನಲ್ಲ. ಹಾಲು ಕುಡಿಯಿರಿ. ಹಾಲು ಕಂಪ್ಲೀಟ್ ಫುಡ್ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕುರಿಯನ್ ಹಾಲು ಉತ್ಪಾದಕರ ಸಂಘಟನೆ ಮಾಡಿದ ಗುಜರಾತ್ ದೇಶದಲ್ಲೇ ಹಾಲು ಉತ್ಪಾದನೆಯಲ್ಲಿ ನಂ.1 ಸ್ಥಾನದಲ್ಲಿದೆ. ನಾವು ಎರಡನೇ ಸ್ಥಾನದಲ್ಲಿದ್ದೇವೆ.

ನಾನೂ ಈ ಹಿಂದೆ ಪಶು ಸಂಗೋಪನಾ ಇಲಾಖೆಯ ಸಚಿವನಾಗಿದ್ದೆ. ಪಶು ಸಂಗೋಪನೆ ಎನ್ನುವುದು ನಮ್ಮ ರೈತರ ಉಪ ಕಸುಬು. ಕರ್ನಾಟಕ 1 ಕೋಟಿ ಕೆಜಿಯಷ್ಟು ಹಾಲು ಉತ್ಪಾದನೆ ಮಾಡುತ್ತಿದೆ. ಪ್ರತಿ ದಿನ 31 ಕೋಟಿ ಹಣ ಹಳ್ಳಿಗೆ ಹೋಗುತ್ತಿದೆ. ರಾಜ್ಯ ಸರ್ಕಾರದಿಂದ 5 ರೂ. ನೀಡಲಾಗುತ್ತಿದೆ ಎಂದಿದ್ದಾರೆ.

ಹಾಲು ಸಂಪೂರ್ಣ ಆಹಾರ. ದೇವತೆಗಳೇ ಸಾರಾಯಿ ಕುಡಿತಿದ್ರು. ಆದರೆ ನಾವು ಹಾಗೆ ಹೇಳಲ್ಲ. ಜನ ಹೆಚ್ಚು ಪ್ರಮಾಣದಲ್ಲಿ ಹಾಲು ಉಪಯೋಗಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ