ಸಿಎಂ ಸಿದ್ದರಾಮಯ್ಯಗೆ ಇಂದು ಗಂಡಾಂತರ ಗ್ಯಾರಂಟಿ

Krishnaveni K

ಶುಕ್ರವಾರ, 27 ಸೆಪ್ಟಂಬರ್ 2024 (09:59 IST)
ಬೆಂಗಳೂರು: ಮುಡಾ ಹಗರಣದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ತನಿಖೆಗೆ ಆದೇಶಿಸಿದ್ದು, ಇಂದೇ ಸಿಎಂಗೆ ಗಂಡಾಂತರ ಕಾದಿದೆ.

ಇಂದು ಸಿಎಂ ವಿರುದ್ಧ ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ. ಸಿಎಂ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಇಂದು ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ನಿನ್ನೆ ಸಂಜೆಯಷ್ಟೇ ಲೋಕಾಯುಕ್ತ ಎಸ್ ಪಿ ಉದೇಶ್ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ತನಿಖೆಗೆ ನೀಡಲಾಗಿದ್ದ  ಆದೇಶ ಪ್ರತಿ ಪಡೆದುಕೊಂಡಿದ್ದರು.

ಎಫ್ಐಆರ್ ನಲ್ಲಿ ಸಿಎಂ ಸಿದ್ದರಾಮಯ್ಯನವರೇ ಎ1 ಆರೋಪಿಯಾಗುವ ಸಾಧ್ಯತೆಯಿದೆ. ಇದರಿಂದ ಸಿದ್ದರಾಮಯ್ಯ ವಿರುದ್ಧ ಕೇಸ್ ಸ್ಟ್ರಾಂಗ್ ಆಗಲಿದೆ. ಇನ್ನೊಂದೆಡೆ ಎಸ್ ಪಿ ಎಫ್ಐಆರ್ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಮುಡಾ ಹಗರಣ ದೂರುದಾರ ಸ್ನೇಹಮಯಿ ಕೃಷ್ಣ ಎಸ್ ಪಿ ವಿರುದ್ಧವೂ ದೂರು ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಎಫ್ಐಅರ್ ದಾಖಲಾದ ನಂತರ ಕೇಸ್ ಗೆ ಮತ್ತಷ್ಟು ಬಲ ಸಿಗಲಿದೆ. ಒಂದು ವೇಳೆ ಅಗತ್ಯ ಬಂದರೆ ಅವರ ಬಂಧನವಾದರೂ ಅಚ್ಚರಿಯಿಲ್ಲ. ಎಫ್ಐಆರ್ ನಲ್ಲಿ ಯಾರು ಎ1 ಆರೋಪಿಯಾಗುತ್ತಾರೆ ಎಂಬುದೂ ಈ ಹಂತದಲ್ಲಿ ಪ್ರಮುಖವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ