ಬೆಂಗಳೂರು: ಪಾಕಿಸ್ತಾನದ ಜೊತೆ ಪಹಲ್ಗಾಮ್ ದಾಳಿಯ ಬಳಿಕವೂ ಯುದ್ಧ ಅಗತ್ಯವಿಲ್ಲ ಎಂದಿದ್ದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಈಗ ಪಾಕಿಸ್ತಾನದಲ್ಲೂ ಫೇಮಸ್ ಆಗಿದ್ದಾರೆ.
ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ, ಪಾಕಿಸ್ತಾನದ ಜೊತೆ ಯುದ್ಧ ಅಗತ್ಯವಿಲ್ಲ. ನಮಗೆ ಶಾಂತಿ ಮುಖ್ಯ. ಬಿಗಿ ಕ್ರಮಗಳನ್ನು ಕೈಗೊಳ್ಳಲಿ, ಭದ್ರತೆ ಹೆಚ್ಚಿಸಲಿ ಎಂದಿದ್ದರು. ಅವರ ಹೇಳಿಕೆ ಈಗ ಪಾಕಿಸ್ತಾನದಲ್ಲೂ ಫೇಮಸ್ ಆಗಿದೆ.
ಅಲ್ಲಿನ ಕೆಲವು ಮಾಧ್ಯಮಗಳೂ ಸಿದ್ದರಾಮಯ್ಯ ಹೇಳಿಕೆಯನ್ನು ಪ್ರಸಾರ ಮಾಡಿವೆ. ಸಿದ್ದರಾಮಯ್ಯನವರ ಹೇಳಿಕೆ ಪ್ರಶಂಸಿಸಿ ಪಾಕ್ ಟಿವಿ ವಾಹಿನಿಯ ವರದಿಯೊಂದನ್ನು ವಿಪಕ್ಷ ನಾಯಕ ಆರ್ ಅಶೋಕ್ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯನವರು ಪಾಕಿಸ್ತಾನದ ಕೈಗೊಂಬೆಯಂತಹ ಹೇಳಿಕೆಯಿಂದ ವರ್ಲ್ಡ್ ಫೇಮಸ್ ಆಗಿದ್ದಾರೆ. ಮುಂದೆ ಪಾಕಿಸ್ತಾನದವರು ಸಿದ್ದರಾಮಯ್ಯ ಹೇಳಿಕೆಯನ್ನು ಮೆಚ್ಚಿ ನಿಶಾನ್ ಎ ಪಾಕಿಸ್ತಾನ್ ಪ್ರಶಸ್ತಿ ಕೊಟ್ಟರೂ ಅಚ್ಚರಿಯಿಲ್ಲ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ತಮಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು… pic.twitter.com/OjcCkrEMtb