ಬೆಂಗಳೂರು: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಶಾಂತಿಯಿಂದಿರೋಣ ಎನ್ನುವ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಅಮೆರಿಕಾ, ಲಂಡನ್, ರಷ್ಯಾ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳೂ ಖಂಡಿಸಿವೆ. ಅಲ್ಲಿ ಉಗ್ರರು ಹಿಂದೂಗಳ ಎಂದು ಕೇಳಿ ಕೇಳಿ ಹತ್ಯೆ ಮಾಡಿದ್ದಾರೆ. ಇದನ್ನು ಯಾರು ಕೂಡಾ ಕ್ಷಮಿಸಲು ಸಾಧ್ಯವೇ ಇಲ್ಲ. ಸಿದ್ದರಾಮಯ್ಯನವರು ಒಬ್ಬರೇ ಕ್ಷಮಿಸಬಹುದು.
ಯಾಕೆಂದರೆ ಬರ್ತಾ ಬರ್ತಾ ಅವರ ಮನಸ್ಥಿತಿ ಕೆಡುತ್ತಾ ಇದೆ. ವೋಟಿಗೋಸ್ಕರ ದೇಶಕ್ಕೆ ಏನು ಬೇಕಾದ್ರೂ ಆಗಲಿ ಎಂಬ ಮನಸ್ಥಿತಿ ಬಂದಿದೆಯಲ್ಲಾ? ಇದು ನಾಚಿಕೆಗೇಡಿನ ಸಂಗತಿ. ಯಾಕೆಂದರೆ ಸಿದ್ದರಾಮಯ್ಯನವರಿಗೆ ಯಾವುದೇ ಸಿದ್ಧಾಂತಗಳಿಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಾಯುವವರೆಗೂ ಅಧಿಕಾರದಲ್ಲಿರಬೇಕು ಎನ್ನುವ ಮಹತ್ವಾಕಾಂಕ್ಷಿ ವ್ಯಕ್ತಿ ಸಿದ್ದರಾಮಯ್ಯ. ಇಡೀ ದೇಶವೇ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡ್ತಿದೆ. ಸಿದ್ದರಾಮಯ್ಯನವರು ನಿಮ್ಮ ಮನೆಯಲ್ಲೇ ಈ ರೀತಿ ಮಾಡ್ತಿದ್ದರೆ ಬಿಡ್ತಾಇದ್ರಾ? ಬೇರೆಯವರ ಕುಟುಂಬದಲ್ಲಿ ಆದ ಸಾವಿಗೆ ಬೆಲೆ ಇಲ್ವಾ? ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.