ವೃದ್ಧನೋರ್ವನಿಗೆ 9500 ರೂ ಸಹಾಯ ಧನ ನೀಡಿ ಸಿಎಂ ಸಿದ್ದರಾಮಯ್ಯ ಔದಾರ್ಯತೆಯನ್ನು ಮೆರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ದರ್ಶನ ಕಾರ್ಯಕ್ರಮಕ್ಕೆ ಬಂದಿದ್ದ ವೃದ್ಧನಿಗೆ 500 ರೂ. ಮುಖಬೆಲೆಯ 19 ನೋಟುಗಳನ್ನು ಎಣಿಸಿ ಧನ ಸಹಾಯ ನೀಡಿದ್ದಾರೆ
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ವೃದ್ಧ, ಮೈಗೆ ಹುಷಾರಿಲ್ಲ ಎಂದು ಹೇಳಿದಾಗ ವೃದ್ಧನ ಅಳಲಿಗೆ ಸ್ಪಂದಿಸಿದ ಸಿಎಂ, 9500 ರೂಪಾಯಿಗಳನ್ನು ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.