ಹೆದರಕ್ಕೆ ಸಿಎಂ ಸಿದ್ದರಾಮಯ್ಯ ಏನ್ ದೆವ್ವನಾ: ಎಚ್‌ಡಿ ಕುಮಾರಸ್ವಾಮಿ

Sampriya

ಶನಿವಾರ, 5 ಅಕ್ಟೋಬರ್ 2024 (14:56 IST)
ಬೆಂಗಳೂರು: ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು, ಸಿಎಂ ಏನ್ ದೆವ್ವನಾ ನಾನು ಹೆದರೋಕೆ ಎಂದು ಕೌಂಟರ್ ನೀಡಿದ್ದಾರೆ.

ಸಿದ್ದರಾಮಯ್ಯನಂತಹ ಲಕ್ಷ ಜನ ಬಂದರೂ ನಾನು ಹೆದರುವುದಿಲ್ಲ. ನಾನು ಸಿದ್ದರಾಮಯ್ಯ ನೆರಳಿನಲ್ಲಿ ಆಗಲಿ, ಹೆಸರಿನಲ್ಲಿ ಆಗಲಿ ನಾನು ರಾಜಕೀಯಕ್ಕೆ ಬಂದಿರುವುದಲ್ಲ. ಸ್ವಂತ ದುಡಿಮೆಯಲ್ಲಿ, ಕಾರ್ಯಕರ್ತರ ದುಡಿಮೆಯಲ್ಲಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ದೇವೇಗೌಡರ ನೆರಳಿನಲ್ಲಿ ರಾಜಕೀಯಕ್ಕೆ ಬಂದಿರುವ ನಾನು, ನಾಡಿನ ಜನರಿಗಷ್ಟೇ ಹೆದರುತ್ತೇನೆ ಎಂದರು.

ಸಿಎಂ ಏನಾದರೂ ದೆವ್ವ ಆಗಿದ್ದರೆ ಹೆದರಬೇಕಿತ್ತು. ಅವರೇನು ದೆವ್ವ ಅಲ್ವಲ್ಲ, ಹಾಗಾಗಿ ನಾನ್ಯಾಕೆ ಭಯ ಬೀಳಲಿ ಎಂದರು. ನನ್ನ ಜೆಡಿಎಸ್ ದುರ್ಬಲ ಆಗುತ್ತೋ ಬಲಗೊಳ್ಳುತ್ತೋ ಎನ್ನುವುದನ್ನು ದೇವರು ನೋಡಿಕೊಳ್ಳುತ್ತಾನೆ. ಮೊದಲು ಸಮಸ್ಯೆಯಲ್ಲಿರುವುದನ್ನು ಬಗೆಹರಿಸಿಕೊಳ್ಳಿ. ಕುಮಾರಸ್ವಾಮಿ ಹೆದರುವುದು ಕೇವಲ ದೇವರಿಗೆ ಮತ್ತು ಜನರಿಗೆ ಮಾತ್ರ ಎಂದರು.

ಕುಮಾರಸ್ವಾಮಿ ಹತ್ತಿರ ಇವರದು ಏನು ನಡೆಯಲ್ಲ. ಎಫ್‌ಐಆರ್ ಮಾಡಿ ಹೆದರಿಸುವ ಕೆಲಸ ಅಷ್ಟೇ. ಕಾಲ ಪ್ರತಿಯೊಂದಕ್ಕೂ ಉತ್ತರ ನೀಡಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ಭಯ, ಭಕ್ತಿ ಯಾವುದು ಇಲ್ಲದ ಭಂಡ ಸರ್ಕಾರ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ