ಮಸೀದಿ ಮುಂದೆ ಗಲಾಟೆ ಮಾಡಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ್ದು: ಸಿದ್ದರಾಮಯ್ಯ ಸಮರ್ಥನೆ
ಪ್ರತಿಭಟಿಸಿದ ಹಿಂದೂಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಕಲ್ಲು ತೂರಾಟ ಮಾಡಿದವರ ವಿರುದ್ಧ ಲಾಠಿ ಚಾರ್ಜ್ ಮಾಡಿದ್ದಕ್ಕೆ ಬಿಜೆಪಿ ಮತ್ತು ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಅದರಲ್ಲೂ ಓರ್ವ ಹೆಣ್ಣು ಮಗಳನ್ನು ಅಟ್ಟಾಡಿಸಿಕೊಂಡು ಪೊಲೀಸರು ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಮಸೀದಿ ಮುಂದೆ ಮೆರವಣಿಗೆ ಹೋಗುವಾಗ ಸ್ವಲ್ಪ ಗಲಾಟೆ ಆಗಿದೆ. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಹಿಂದೂಗಳೇ ಆಗಿರಲಿ, ಮುಸಲ್ಮಾನರೇ ಆಗಿರಲಿ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮಸೀದಿ ಮುಂದೆ ನಿಲ್ಲಬೇಡಿ ಎಂದು ಪೊಲೀಸರು ಕೂಗಿ ಹೇಳಿದ್ರೂ ಕೇಳಲಿಲ್ಲ. ಪೊಲೀಸರು ಯಾವ ತಪ್ಪೂ ಮಾಡಿಲ್ಲ. ಕಾನೂನು ರೀತಿಯೇ ನಡೆದುಕೊಂಡಿದ್ದಾರೆ ಎಂದಿದ್ದಾರೆ.