ಮದ್ದೂರು ಗಣೇಶ ಗಲಾಟೆ: ದೇಶದಾದ್ಯಂತ ವೈರಲ್ ಆಯ್ತು ಈ ಒಂದು ವಿಡಿಯೋ

Krishnaveni K

ಸೋಮವಾರ, 8 ಸೆಪ್ಟಂಬರ್ 2025 (15:13 IST)
Photo Credit: X
ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ಪ್ರತಿಭಟಿಸಿ ಉದ್ರಿಕ್ತ ಹಿಂದೂಗಳು ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದ ಒಂದು ವಿಡಿಯೋ ದೇಶದಾದ್ಯಂತ ವೈರಲ್ ಆಗಿದೆ.

ಕಳೆದ ವರ್ಷ ಗಣೇಶ ಮೆರವಣಿಗೆ ಹಿಂಸಾಚಾರದ ಬಗ್ಗೆ ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸರು ಗಣೇಶನನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ಕೂರಿಸಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದೀಗ ಮದ್ದೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಯುವತಿಯೋರ್ವಳನ್ನು ಪೊಲೀಸರು ಅಟ್ಟಾಡಿಸಿಕೊಂಡು ಲಾಠಿ ಬೀಸಿದ್ದಾರೆ. ಆಕೆ ನೋವು ತಾಳಲಾರದೇ ರಸ್ತೆಯಲ್ಲೇ ಕುಸಿದು ಕುಳಿತು ಜೋರಾಗಿ ಅಳುತ್ತಿದ್ದಾಳೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಮತ್ತು ಸಾರ್ವನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಓರ್ವ ಮಹಿಳೆಯ ಮೇಲೆ ಪುರುಷ ಪೊಲೀಸ್ ಅಧಿಕಾರಿಗಳು ಹೊಡೆಯುವಂತಿಲ್ಲ. ಆದರೆ ಇಲ್ಲಿ ಪೊಲೀಸರು ಒಬ್ಬ ಮಹಿಳೆ ಎನ್ನುವುದನ್ನೂ ಗಮನಿಸಿದೇ ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಗಣೇಶ ಉತ್ಸವಕ್ಕೆ ರಕ್ಷಣೆ ನೀಡದ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ!#CongressAgainstHindus #HinduVirodhiCongress pic.twitter.com/qgtd1rt7Qr

— BJP Karnataka (@BJP4Karnataka) September 8, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ